ದೇಶ

ನಾವು ಬ್ರಿಟಿಷ್ ಕಾಲದ ಕಾನೂನಿಗೆ ಅಂಟಿಕೊಂಡಿದ್ದೇವು: ಮಹಿಳಾ ಆಯೋಗದ ಮುಖ್ಯಸ್ಥೆ

Lingaraj Badiger
ನವದೆಹಲಿ: ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರು, ಸೆಕ್ಷನ್ 497 ಅನ್ನು ಯಾವತ್ತೊ ತೆಗೆದುಹಾಕಬೇಕಿತ್ತು ಎಂದಿದ್ದಾರೆ.
ಇದು ಬ್ರಿಟಿಷ್ ಕಾಲದ ಕಾನೂನು. ಇದನ್ನು ಬ್ರಿಟಿಷರು ಬಿಟ್ಟು ಹೋಗಿ ಎಷ್ಟೋ ವರ್ಷಗಳೇ ಆಗಿವೆ. ಆದರೂ ನಾವು ಅದಕ್ಕೆ ಅಂಟಿಕೊಂಡಿದ್ದೇವು ಎಂದು ಶರ್ಮಾ ಹೇಳಿದ್ದಾರೆ.
ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಪ್ರಾಣಾಪಾಯ ತರದ ವಿವಾಹಯೇತರ ಅಕ್ರಮ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಹೇಳುವ ಮೂಲಕ, 150 ವರ್ಷದ ಹಳೇಯ ಕಾನೂನನ್ನು ಅಸಂವಿಧಾನಿಕ ಎಂದು ಹೇಳಿದೆ. 
ವಿವಾಹಯೇತರ ಸಂಬಂಧ ತೀರಾ ಖಾಸಗಿ ವಿಚಾರವಾಗಿದ್ದು, ಅನೇಕ ದೇಶಗಳು ಇದನ್ನು ಅಪರಾಧ ಮುಕ್ತಗೊಳಿಸಿವೆ ಎಂದು ಕೋರ್ಟ್ ಹೇಳಿದೆ.
ಐಪಿಸಿ ಸೆಕ್ಷನ್ 497ರಲ್ಲಿ ಅನೈತಿಕ ಸಂಬಂಧಕ್ಕೆ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿತ್ತು.
SCROLL FOR NEXT