ಸಂಗ್ರಹ ಚಿತ್ರ 
ದೇಶ

ಉತ್ತರ ಪ್ರದೇಶ: ಕಾರು ನಿಲ್ಲಿಸಲಿಲ್ಲ ಎಂದು ಗುಂಡು ಹಾರಿಸಿದ ಪೊಲೀಸ್ ಪೇದೆ, ಆ್ಯಪಲ್ ಉದ್ಯೋಗಿ ಸಾವು!

ಸೂಚನೆ ನೀಡಿದರೂ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೇ ಪೊಲೀಸ್ ಪೇದೆಯೋರ್ವ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದು, ಪರಿಣಾಮ ಆ್ಯಪಲ್ ಸಂಸ್ಥೆಯ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಖನೌ: ಸೂಚನೆ ನೀಡಿದರೂ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೇ ಪೊಲೀಸ್ ಪೇದೆಯೋರ್ವ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದು, ಪರಿಣಾಮ ಆ್ಯಪಲ್ ಸಂಸ್ಥೆಯ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶ ರಾಜಧಾನಿ ಲಖನೌನಲ್ಲಿ ಈ ಘಟನೆ ಸಂಭವಿಸಿದ್ದು, ಹತ್ಯೆಯಾದ ಯುವಕನನ್ನು ಆ್ಯಪಲ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭದಲ್ಲಿ ವಿವೇಕ್ ತಿವಾರಿ ತನ್ನ ಸಹೋದ್ಯೋಗಿ ಸನಾ ಖಾನ್ ಜೊತೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಪೊಲೀಸರು ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಇದರಿಂದ ಹೆದರಿದ ತಿವಾರಿ ಕಾರು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನಗೊಂಡು ಪೇದೆ ಪ್ರಶಾಂತ್ ಚೌದರಿ ಕಾರಿನ ಬೆನ್ನು ಹತ್ತಿದ್ದಾರೆ. ಈ ವೇಳೆ ತಿವಾರಿ ಕಾರು ಪೊಲೀಸ್ ಪೇದೆಗಳ ಬೈಕ್ ಗೆ ಢಿಕ್ಕಿ ಹೊಡಿದೆದೆ. ಬಳಿಕ ಆಕ್ರೋಶಗೊಂಡ ಪೇದೆ ಚೌದರಿ ತಿವಾರಿ ಮೇಲೆ ಗುಂಡು ಹಾರಿಸಿದ್ದು, ಗುಂಡೇಟು ತಗುಲುತ್ತಿದ್ದಂತೆಯೇ ತಿವಾರಿ ಅಂಡರ್ ಪಾಸ್ ಪಿಲ್ಲರ್ ಗೆ ಕಾರು ಢಿಕ್ಕಿ ಹೊಡೆದಿದ್ದಾರೆ. 
ಈ ವೇಳೆ ತಿವಾರಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಯುವಕನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಸಂಬಂಧ ತಿವಾರಿ ಸಹೋದ್ಯೋಗಿ ಸನಾ ಖಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಆಕೆ ನೀಡಿದ ದೂರಿನ ಮೇರೆಗೆ ಪೇದೆ ಪ್ರಶಾಂತ್ ಚೌದರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ತಮ್ಮ ಪತಿಯ ಮೇಲೆ ಪೊಲೀಸರ ಗುಂಡಿನ ದಾಳಿ ಬಗ್ಗೆ ಮಾತನಾಡಿರುವ ತಿವಾರಿ ಪತ್ನಿ ಕಲ್ಪನಾ ತಿವಾರಿ ಅವರು, ನನ್ನ ಗಂಡ ಉಗ್ರಗಾಮಿಯಲ್ಲ. ಆತನ ಮೇಲೆ ಗುಂಡು ಹಾರಿಸುವ ಹಕ್ಕು ಪೊಲೀಸರಿಗೆ ಇಲ್ಲ. ಪ್ರಕರಣ ಸಂಬಂಧ ಸಿಎಂ ಯೋಗಿ ಆದಿತ್ಯಾನಾಥ್ ಅವರು ಮಧ್ಯ ಪ್ರವೇಶ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು  ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

ಲಂಕಾ ವಿರುದ್ಧ ಏಕದಿನ, ಟೆಸ್ಟ್​ ತಂಡ ಪ್ರಕಟ: ರಿಷಭ್ ಪಂತ್‌ಗೆ ಕೊಕ್; ಕನ್ನಡಿಗ ಕೆಎಲ್ ರಾಹುಲ್ ಉಪನಾಯಕ

NEET ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತ ಆರೋಪಿಗಳ ಕೋಚಿಂಗ್ ಸೆಂಟರ್ ಕಟ್ಟಡಗಳನ್ನು ಕೆಡವಿ; ಮಹಾ ಸಚಿವ ಆಗ್ರಹ

ದೇವಾಲಯಗಳ ಚಿನ್ನದ ಮೇಲೆ ಪ್ರಧಾನಿ ಮೋದಿ ಕಣ್ಣು?: ಕೇಂದ್ರ ಸರ್ಕಾರ ಹೇಳಿದ್ದೇನು?

Ebola outbreak: ಮಾರಣಾಂತಿಕ ಎಬೋಲಾಗೆ 131 ಸಾವು, 500ಕ್ಕೂ ಹೆಚ್ಚು ಶಂಕಿತ ಕೇಸ್; ವಿಶ್ವಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ!

SCROLL FOR NEXT