ದೇಶ

ಎರಡು ದಶಕದ ಹಿಂದೆ ಕೋರ್ಟ್ ಆದೇಶದೊಂದಿಗೆ 41ನೇ ವಯಸ್ಸಿನ ಮಹಿಳಾ ಐಎಎಸ್ ಅಧಿಕಾರಿ ಶಬರಿಮಲೆಗೆ ಭೇಟಿ !

Nagaraja AB

ತಿರುವನಂತಪುರಂ:ಕೇರಳದ ಶಬರಿಮಲೆ  ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ  ಸುಪ್ರೀಂಕೋರ್ಟ್ ಈಗ  ಆದೇಶ ನೀಡಿದೆ. ಆದರೆ. ಎರಡು ದಶಕದ ಹಿಂದೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು  ಕರ್ತವ್ಯದ ಮೇರೆಗೆ  ಹೈಕೋರ್ಟ್ ನಿಂದ ವಿಶೇಷ ಅನುಮತಿ ಪಡೆದು  ಭೇಟಿ ನೀಡಿದ್ದ ಸಂಗತಿ ತಿಳಿದುಬಂದಿದೆ.

ಬೆದರಿಕೆಗಳ ನಡುವೆ ಪಥನಾಮ್ ತಿತ ಜಿಲ್ಲೆಯ ಜಿಲ್ಲಾಧಿಕಾರಿ ಕೆ. ಬಿ. ವಲ್ಸಾಲ ಕುಮಾರಿ  41 ವಯಸ್ಸಿನಲ್ಲಿದ್ದಾಗ 1994- 95 ರ ಅವಧಿಯಲ್ಲಿ ದೇವಾಲಯ ಸಂಕೀರ್ಣಕ್ಕೆ ನಾಲ್ಕು ಬಾರಿ ಭೇಟಿ ನೀಡಿದ್ದರು.
10-50  ವಯೋಮಾನದ ಮಹಿಳೆಯರ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ನಂತರ ವಾರ್ಷಿಕೋತ್ಸವದ ಸಿದ್ಧತೆಗಾಗಿ  ವಿವಿಧ ಏಜೆನ್ಸಿಗಳ ಕಾರ್ಯಚಟುವಟಿಕೆಯೊಂದಿಗೆ ಸಹಕರಿಸಲು ಕೇರಳ ಹೈಕೋರ್ಟ್ ಕುಮಾರಿ ಅವರು ದೇವಾಲಯ ಭೇಟಿಗೆ ಅವಕಾಶ ಮಾಡಿಕೊಟ್ಟಿತ್ತು.
ಆ ವಯಸ್ಸಿನಲ್ಲಿಯೇ ಶಬರಿಮಲೆಗೆ ಭೇಟಿ ನೀಡಿದ್ದಕ್ಕೆ ಹೈಕೋರ್ಟ್ ಗೆ ಧನ್ಯವಾದ ಹೇಳುವ ಮಹಿಳೆ, ಈಗ ಸುಪ್ರೀಂಕೋರ್ಟ್  ಮೂಲಕ ದೇವಾಲಯದ ಎಲ್ಲಾ ಬಾಗಿಲುಗಳು ಎಲ್ಲಾ ವಯೋಮಾನದ ಮಹಿಳೆಯರಿಗೆ ಮುಕ್ತವಾಗಿದ್ದು,  ತೀರ್ಪು ಉತ್ತಮವಾಗಿದೆ ಎಂದು ಆ ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ.
ಕುಮಾರಿ ಕಾನೂನು ಬೆಂಬಲದೊಂದಿಗೆ ಶಬರಿಮಲೆಗೆ ಭೇಟಿ ನೀಡಿದ ಪ್ರಪ್ರಥಮ ಮಹಿಳೆಯಾಗಿದ್ದಾರೆ. ಈಗ ಅವರು ಸೇವೆಯಿಂದ ನಿವೃತ್ತರಾಗಿದ್ದು,50 ವರ್ಷದ ನಂತರ ಅಯ್ಯಪ್ಪನಿಗೆ ಪೂಜೆ ಸಲ್ಲಿಸಬಹುದಾಗಿದೆ.
SCROLL FOR NEXT