ದೇಶ

ಪ್ಯಾನ್ ಕಾರ್ಡ್ ಪಡೆಯಲು ಸುಳ್ಳು ಮಾಹಿತಿ: ಮಮತಾ ಬ್ಯಾನರ್ಜಿ ಸಂಬಂಧಿಗೆ ಗೃಹ ಸಚಿವಾಲಯ ನೋಟೀಸ್

Raghavendra Adiga
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಗೆ ಗೃಹ ವ್ಯವಹಾರ ಸಚಿವಾಲಯದ ವಿದೇಶಾಂಗಗಳ ವಿಭಾಗವು ನೋಟಿಸ್ ಜಾರಿಗೊಳಿಸಿದೆ ಬ್ಯಾನರ್ಜಿಯವರ ಪತ್ನಿ ತಾವು ಭಾರತದ ಅಧಿಕೃತ ನಾಗರಿಕತ್ವವನ್ನು ಪಡೆಯಲು ಅರ್ಹ ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸುವ ವೇಳೆ ಸತ್ಯವನ್ನು ಮರೆಮಾಚಿದ್ದಾರೆ ಎಂಬ ಕಾರಣ ಈ ನೋಟಿಸ್ ನೀಡಲಾಗಿದೆ. ಅಭಿಷೇಕ್ ಬ್ಯಾನರ್ಜಿ ಪತ್ನಿ ಸಾಗರೋತ್ತರ ಭಾರತೀಯ ನಾಗರಿಕತ್ವ ದಾಖಲೆ ಹಾಗೂ ಪ್ಯಾನ್ ನಂಬರ್ ಪಡೆದುಕೊಳ್ಳುವ ಸಲುವಾಗಿ ವಂಚಿಸಿದ್ದಾರೆ ಎನ್ನಲಾಗಿದೆ.
ಥಾಯ್ ಲ್ಯಾಂಡ್ ನಾಗರಾಕರಾಗಿರುವ ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ನರೂಲಾ ಅವರು ಸಾಗರೋತ್ತರ ಭಾರತೀಯ ನಾಗರಿಕತ್ವ ದಾಖಲೆ (ಒಸಿಐ) ಹೊಂದಿದ್ದೂ 49 ಎ ಅರ್ಜಿಯನ್ನೇಕೆ ಭರ್ತಿ ಮಾಡಿದ್ದಾರೆ ಎಂದು ಸಚಿವಾಲಯ ಪ್ರಶ್ನಿಸಿದೆ. ಸಚಿವಾಲಯದ ಪ್ರಕಾರ ನರೂಲಾ ಅವರು ಪ್ಯಾನ್ ನಂಬರ್ ಪಡೆಯುವ ಸಲುವಾಗಿ 49  ಎಎ ಅರ್ಜಿಯನ್ನು ಭರ್ತಿ ಮಾಡಬೇಕಾಗಿದೆ. ಆದರೆ ಆಕೆ 49 ಎ ಅರ್ಜಿ ಸಲ್ಲಿಸಿರುವುದೇಕೆ ಎಂದು ಕೇಳಿದೆ. ಮುಂದಿನ ಹದಿನೈದು ದಿನಗಳಲ್ಲಿ ನರೂಲಾ ಈ ನೋತೀಸ್ ಗೆ ಉತ್ತರಿಸಬೇಕೆಂದು ಸಚಿವಾಲಯ ನಿರ್ದೇಶಿಸಿದೆ.
"14.11.2009 ರಂದು ನರೂಲಾ ಅವರು  ಥಾಯ್ ರಾಷ್ಟ್ರೀಯತೆಯ ತನ್ನ ನೈಜ ಸ್ಥಿತಿ ಮರೆಮಾಚಿ ದೆ ಫಾರಂ 49 ಎ ಅನ್ನು ಭರ್ತಿ ಮಾಡಿದ್ದಾರೆ.  ಅಲ್ಲದೆ ಪ್ಯಾನ್ ಕಾರ್ಡ್ ಪಡೆಯುವ ಸಲುವಾಗಿ ಗುರುಶರಣ್ ಸಿಂಗ್ ಅಹುಜಾರನ್ನು ತನ್ನ ತಂದೆಯೆಂದು ನಮೂದಿಸಿ ಅರ್ಜಿ ಸಲ್ಲಿಸಿದ್ದಾರೆ. " ಕೇಂದ್ರ ಸರ್ಕಾರ ಹೇಳಿದೆ. ಓಎನ್ಐ ಕಾರ್ಡ್ ಹೊಂದಿರುವ ವಿದೇಶಿಯಳಾಗಿ  ತನ್ನನ್ನು ತಾನು ಘೋಷಿಸುವ ಮೂಲಕ ಫಾರಂ 49 ಎಎ ಅರ್ಜಿ ಭರ್ತಿ ಮಾಡುವ ಅಗತ್ಯವಿದ್ದು ಆಕೆ ಹಾಗೆ ಮಾಡಿಲ್ಲವೇಕೆ ಎಂದು ಸರ್ಕಾರ ಕೇಳಿದೆ.
SCROLL FOR NEXT