ದೇಶ

ಪಶ್ಚಿಮ ಬಂಗಾಳ : 'ಸ್ಪೀಡ್ ಬ್ರೇಕರ್ 'ದೀದಿಯಿಂದ ಕೇಂದ್ರ ಸರ್ಕಾರದ ಯೋಜನೆಗಳಿಗೆ ತಡೆ - ಪ್ರಧಾನಿ ಮೋದಿ

Nagaraja AB

ಕೋಚ್ ಬೆಹಾರ್ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗೆ ಸ್ಪೀಡ್ ಬ್ರೇಕ್ ದೀದಿಯಿಂದ ತಡೆಯೊಡ್ಡಲಾಗಿದೆ. ದೇಶದ ಇತರ ಭಾಗಗಳಲ್ಲಿ ಲಭ್ಯವಿರುವ ಅನುಕೂಲಗಳನ್ನು ಇಲ್ಲಿನ ಜನರಿಗೆ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಸಮೇಳ ಮೈದಾನದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಮಮತಾ  ಬ್ಯಾನರ್ಜಿ ಅವರ ಸ್ವಯಂ ಪ್ರತಿಷ್ಠೆಯಿಂದಾಗಿ ಇಲ್ಲಿನ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳು ದೊರೆಯದಂತಾಗಿದೆ. ಇಲ್ಲಿನ ಜನರು ಮಮತಾ ಮೇಲಿಟ್ಟಿದ್ದ ಭರವಸೆಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಶಾರದಾ ಚಿಟ್ ಫಂಡ್ , ರೋಸ್ ವ್ಯಾಲಿ, ಮತ್ತು ನರ್ಮದಾ ಹಗರಣದಲ್ಲಿ ದೀದಿ ಅವರ ಮೇಲೂ ಆರೋಪವಿದೆ. ಲೂಟಿ ಹೊಡೆದವರಿಂದ ಪ್ರತಿ ಪೈಸೆಗೂ ಉತ್ತರ ಪಡೆಯುವುದಾಗಿ ಭರವಸೆ ನೀಡುವುದಾಗಿ ನರೇಂದ್ರ ಮೋದಿ  ನುಡಿದರು.

ತಮ್ಮ ಪ್ರಚಾರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳದಂತೆ ಮಾಡಲು ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ. ಇಂತಹ ಚೈಲ್ಡೀಸ್  ಚಟುವಟಿಕೆಗಳಿಂದ  ಹೇಗೆ ಚುನಾವಣೆಯಲ್ಲಿ ಗೆಲ್ಲುವುದಾಗಿ ಹೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.  ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕ್ಷಿಪ್ರ ಗತಿಯಲ್ಲೇ ರಾಜಕೀಯ ನೆಲೆ ಕಳೆದುಕೊಳ್ಳಲಿದ್ದಾರೆ ಎಂದು ಮೋದಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ  ಏಳು ಹಂತಗಳ ಚುನಾವಣೆಯನ್ನು ಆಯೋಗ ಘೋಷಿಸಿದ್ದಾಗ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದರು. ವೋಟ್ ಬ್ಯಾಂಕಿಗಾಗಿ ಅಕ್ರಮ ವಲಸೆಗಾರರನ್ನು ಬ್ಯಾನರ್ಜಿ ರಕ್ಷಿಸುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು.

SCROLL FOR NEXT