ಜಬಲ್ಪುರ: ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧವಾಗಿರುವ ಮೊದಲ ದೇಶಿಯ ಬೋಫೋರ್ಸ್ ಎಂಬ ಹೆಗ್ಗಳಿಕೆ ಹೊಂದಿರುವ ಧನುಷ್ ಆರ್ಟಿಲರಿ ಗನ್ ಸೋಮವಾರ ಭಾರತೀಯ ಸೇನಾಪಡೆ ಸೇರಿಕೊಂಡಿದೆ.
ಇಂದು ಜಬಲ್ಪುರದಲ್ಲಿ ನಡೆದ ಸಮಾರಂಭದಲ್ಲಿ ಆರ್ಡನನ್ಸ್ ಫ್ಯಾಕ್ಟರೀಸ್ ಆಫ್ ಬೋರ್ಡ್ನ ಅಧಿಕಾರಿಗಳು ಧನುಷ್ ಆರ್ಟಿಲರಿ ಗನ್ಗಳನ್ನು ಸೇನೆಗೆ ಹಸ್ತಾಂತರಿಸಿದರು.
ಧನುಷ್ 155ಎಂಎಂ/45 ಕ್ಯಾಲಬರ್ ಟೋಡ್ ಗನ್ ಸಿಸ್ಟಂ ಆಗಿದ್ದು, ಅಂದಾಜು 38 ಕಿ.ಮೀ.ವರೆಗೆ ನಿಖರವಾಗಿ ಗುರಿಸಾಧಿಸುವ ಸಾಮರ್ಥ್ಯ ಹೊಂದಿವೆ.
ವಿದೇಶದಿಂದ ಆಮದು ಮಾಡಿಕೊಳ್ಳಲಾಗಿರುವ ಬೋಫೋರ್ಸ್ ಗನ್ಗಳಿಗೆ ಹೋಲಿಸಿದರೆ ಧನುಷ್ ಆರ್ಟಿಲರಿ ಗನ್ಗಳು 11 ಕಿ.ಮೀ. ಹೆಚ್ಚಿನ ಅಂತರದ ಗುರಿ ಸಾಧಿಸುವ ಸಾಮರ್ಥ್ಯ ಹೊಂದಿವೆ.