ದೇಶ

ಮತದಾನ ಆರಂಭಕ್ಕೆ ಇನ್ನು 3 ದಿನ: ವಿವಿಪ್ಯಾಟ್ ಎಣಿಕೆಗಳ ಸಂಖ್ಯೆ ಹೆಚ್ಚಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

Srinivas Rao BV
ನವದೆಹಲಿ: ವಿವಿಪ್ಯಾಟ್ ಮಾದರಿ ತಪಾಸಣೆ ಪ್ರಮಾಣವನ್ನು ಏರಿಕೆ ಮಾಡಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಏ.08 ರಂದು ಸೂಚನೆ ನೀಡಿದೆ. 
ಈ ವರೆಗೂ ಪ್ರತಿ ವಿಧಾನಸಭಾ ಕ್ಷೇತ್ರಗಳ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್ ಸ್ಯಾಂಪಲ್ ನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಇದನ್ನು ಬದಲಾವಣೆ ಮಾಡಿ  ಒಂದರ ಬದಲು 5 ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಮಾದರಿಯನ್ನು ತಪಾಸಣೆ ಮಾಡಬೇಕೆಂದು ಚುನಾವಣೆಗೆ ಇನ್ನು 3 ದಿನಗಳು ಬಾಕಿ ಇರಬೇಕಾದರೆ ಸುಪ್ರೀಂ ಕೋರ್ಟ್ ಆಯೋಗಕ್ಕೆ ನಿರ್ದೇಶನ ನೀಡಿದೆ. 
ಒಂದು ಮತಗಟ್ಟೆ ಬದಲಿಗೆ 5 ಮತಗಟ್ಟೆಗಳಲ್ಲಿ ಸ್ಯಾಂಪಲ್ ತಪಾಸಣೆಗೆ ನ್ಯಾ.ಗೋಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಸೂಚಿಸಿದೆಯಾದರೂ, ಶೇ.50 ರಷ್ಟು ವಿವಿಪ್ಯಾಟ್ ಚೀಟಿಗಳನ್ನು ತಪಾಸಣೆಗೊಳಪಡಿಸಬೇಕೆಂಬ 21 ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದೆ. 
ಶೇ.50 ರಷ್ಟು ವಿವಿಪ್ಯಾಟ್ ನ್ನು ತಪಾಸಣೆಗೊಳಪಡಿಸಬೇಕಾದರೆ ಅದಕ್ಕೆ ಅತಿ ಹೆಚ್ಚು ಮಾನವ ಶಕ್ತಿ ಅಗತ್ಯವಿರಲಿದೆ. ಮೂಲಸೌಕರ್ಯದ ದೃಷ್ಟಿಯಿಂದ ಅಸಾಧ್ಯ ಎಂಬ ಆಧಾರದಲ್ಲಿ ಸುಪ್ರೀಂ ಕೋರ್ಟ್ ವಿಪಕ್ಷಗಳ ಬೇಡಿಕೆಯನ್ನು ಪುರಸ್ಕರಿಸಿಲ್ಲ. 
SCROLL FOR NEXT