ದೇಶ

ಐಟಿ ದಾಳಿಯಲ್ಲಿ ಕಾಂಗ್ರೆಸ್ ಸಿಎಂ ಆಪ್ತನ ಬಳಿ 281 ಕೋಟಿ ನಗದು ಪತ್ತೆ, ಒತ್ತಡದಲ್ಲಿ ಸಿಎಂ ಕಮಲ್ ನಾಥ್!

Vishwanath S
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಆಪ್ತನ ಮನೆ ಮೇಲಿನ ದಾಳಿ ಕುರಿತಂತೆ ವ್ಯಾಪಕ ಟೀಕೆ ಎದುರಾಗಿತ್ತು. ಆದರೆ ಇದೀಗ ಐಟಿ ದಾಳಿಯಲ್ಲಿ ಬರೋಬ್ಬರಿ 281 ಕೋಟಿ ರುಪಾಯಿ ನಗದು ಪತ್ತೆಯಾಗಿದೆ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಪ್ತರಾಗಿರುವ ಪ್ರವೀಣ್ ಕಕ್ಕಡ್ ಮತ್ತು ಅಶ್ವಿನ್ ಶರ್ಮಾ ಅವರ ನಿವಾಸಗಳ ಮೇಲೆ ಐಟಿ ದಾಳಿ ನಡೆಸಿತ್ತು. ಇದೀಗ ಮೂರನೇ ದಿನವೂ ಐಟಿ ದಾಳಿ ಮುಂದುವರೆದಿದ್ದು 281 ಕೋಟಿ ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿನ ಪಕ್ಷವೊಂದರ ಮುಖ್ಯ ಕಚೇರಿಗೆ 20 ಕೋಟಿ ಹವಾಲಾ ಹಣ ರವಾನೆಯಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿರುವ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಿಂದ ಹಣ ರವಾನೆಯಾಗಿದೆ. ಹಣ ಸಂದಾಯವಾದ ಬಗ್ಗೆ ಬರೆದಿರುವ ಡೈರಿಗಳು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರವೀಣ್ ಕಕ್ಕಡ್ ಅವರು ಸಿಎಂ ಕಮಲ್ ನಾಥ್ ಅವರ ವಿಶೇಷ ಕರ್ತವ್ಯಾಧಿಕಾರಿ(ಒಎಸ್ಡಿ) ಆಗಿದ್ದು ಅಶ್ವಿನ್ ಶರ್ಮಾ ಅವರು ಈತನ ನಿಕಟವರ್ತಿಯಾಗಿದ್ದಾರೆ. ಒಟ್ಟಿನಲ್ಲಿ ಐಟಿ ದಾಳಿಯಿಂದ ಕಮಲ್ ನಾಥ್ ಮೇಲಿನ ರಾಜಕೀಯ ಒತ್ತಡ ಹೆಚ್ಚಿದೆ.
SCROLL FOR NEXT