ರಾಮಮಂದಿರಕ್ಕಾಗಿ ಅಯೋಧ್ಯೆಯಲ್ಲಿ ಕೆತ್ತಲ್ಪಟ್ಟಿರುವ ಕಲ್ಲುಗಳು (ಫೈಲ್ ಚಿತ್ರ)
ನವದೆಹಲಿ: ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ನಿರ್ದೇಶನದಂತೆ ಸಂಧಾನ ಸಮಿತಿ ರಚನೆಯಾಗಿ ಎಂಟು ವಾರಗಳಲ್ಲಿ ಸಂಧಾನ ಸಮಿತಿ ತನ್ನ ತೀರ್ಮಾನ ಹೇಳುವುದರಲ್ಲಿದೆ ಆದರೆ ಈ ನಡುವೆಯೇ ನಿರ್ಮೋಹಿ ಅಖಾಡಾ ವಿವಾದದ ಕುರಿತು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಮಜನ್ಮಭುಮಿ ವಿವಾದಿತ ಜಾಗದ ಸುತ್ತಮುತ್ತಲ ಹೆಚ್ಚುವರಿ ಭೂಮಿಯನ್ನು ಅದರ ಮೂಲ ಮಾಲಿಕರಿಗೆ ನಿಡುವ ಕುರಿತು ಕೇಂದ್ರ ಸರ್ಕಾರ ಕೈಗೊಳ್ಳುತಿರುವ ಕ್ರಮದ ವಿರುದ್ಧ ನಿರ್ಮೋಹಿ ಅಖಾಡಾ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.
ಈ ಜನವರಿಯಲ್ಲಿ ಸರ್ಕಾರ ವಿವಾದಿತ ಬುಮಿಯ ಸುತ್ತಮುತ್ತಲ "ಹೆಚ್ಚುವರಿ / ವಿವಾದರಹಿತವಾದ" 67.7 ಎಕರೆ ಭೂಮಿಯನ್ನು ಅದರ ಮೂಲ ಮಾಲಿಕರಿಗೆ ಹಸ್ತಾಂತರಿಸುವುದಾಗಿ ಕೋರ್ಟ್ ಗೆ ಹೇಳಿತ್ತು. ಇದರಲ್ಲಿ ಸುಮಾರು 48 ಎಕರೆ ಜಾಗವು ರಾಮಜನ್ಮಭೂಮಿ ನ್ಯಾಸ್ ಗೆ ಸೇರಿದ್ದಾಗಿದೆ.
1994ರಲ್ಲಿ ಸರ್ಕಾರ ಈ ಜಾಗವನ್ನು ವಶಕ್ಕೆ ಪಡೆದುಕೊಂಡಾಗ ನಿರ್ಮೋಹಿ ಅಖಾಡ ನಿರ್ಮಿಸಿದ್ದ ಹಲವು ದೇವಾಲಯಗಳು ನಾಶವಾಗಿದೆ ಎಂದು ಅಖಾಡಾ ಈ ದಿನ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ಇಷ್ಟೇ ಅಲ್ಲದೆ ಅಖಾಡಾ ಅಯೋಧ್ಯೆ-ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯ ಸ್ವತಃ ಬಗೆಹರಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದೆ.