ದೇಶ

ಪ್ರಚಾರದ ವೇಳೆ ಹೃದಯಾಘಾತ: ತಮಿಳು ನಟ, ಮಾಜಿ ಸಂಸದ ಜೆಕೆ ರಿತೇಶ್ ನಿಧನ

Lingaraj Badiger
ಚೆನ್ನೈ: ತಮಿಳು ನಟ ಹಾಗೂ ರಾಜಕಾರಣಿ ಜೆಕೆ ರಿತೇಶ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 
46 ವರ್ಷದ, ಎಐಎಡಿಎಂಕೆ ಮಾಜಿ ಸಂಸದ ಜೆಕೆ ರಿತೇಶ್ ಅವರು ಇಂದು ತಮಿಳುನಾಡಿದ ರಾಮನಾಥಪುರಂನಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. 
ಎಐಎಡಿಎಂಕೆ ನಾಯಕ ಅಪಾರವಾದ ಅಭಿಮಾನಿಗಳು ಮತ್ತು ಕುಟುಂಬದವರನ್ನು ಅಗಲಿದ್ದಾರೆ.
ಜೆಕೆ ರಿತೇಶ್ ಅವರು ಕೊನೆಯದಾಗಿ ತಮಿಳು ಚಿತ್ರ 'ಎಲ್‌ಕೆಜಿ' ಯಲ್ಲಿ ಕಾಣಿಸಿಕೊಂಡಿದ್ದರು.
SCROLL FOR NEXT