ದೇಶ

ಭಾರತೀಯ ವಾಯುಪಡೆಯ ಸರ್ವಶ್ರೇಷ್ಠ ಮಾರ್ಷಲ್‌ ಅರ್ಜನ್ ಸಿಂಗ್ ಜನ್ಮಶತಮಾನೋತ್ಸವ ಆಚರಣೆ

Srinivas Rao BV
ಏ.15, ಭಾರತೀಯ ವಾಯುಪಡೆಯ ಮೊದಲ ಸರ್ವಶ್ರೇಷ್ಠ ಮಾರ್ಷಲ್‌ ಅರ್ಜನ್ ಸಿಂಗ್ ಅವರ 100 ನೇ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ.
1965ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ವಾಯುಪಡೆಯ ಸರ್ವಶ್ರೇಷ್ಠ ಮಾರ್ಷಲ್ ಅರ್ಜನ್ ಸಿಂಗ್ ಅಪ್ರತಿಮ ಸಾಧನೆ ಮೆರೆದಿದ್ದರು. 
1965 ರ ಯುದ್ಧದಲ್ಲಿ ಭಾರತೀಯ ವಾಯುಪಡೆಯ ನೇತೃತ್ವ ವಹಿಸಿದ್ದ ಸಿಂಗ್‌ ಅವರು, ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾರತೀಯ ವಾಯುಪಡೆಯ ಮೊದಲ ಮಾರ್ಷಲ್‌ ಎನ್ನುವ ಗೌರವ ಅರ್ಜನ್‌ ಸಿಂಗ್‌ ಅವರದಾಗಿದೆ.
2016ರಲ್ಲಿ ಪಶ್ಚಿಮ ಬಂಗಾಳದಲ್ಲಿರುವ ಪನಾಗರ್ ವಾಯುನೆಲೆಗೆ, ಅರ್ಜನ್ ಸಿಂಗ್  ಅವರ ಹೆಸರನ್ನು ಇಡಲಾಗಿತ್ತು. 1996 ರ ಜ.15 ರಂದು ಅರ್ಜನ್ ಸಿಂಗ್ ಅವರನ್ನು ಭಾರತೀಯ ವಾಯುಪಡೆಯ ಮೊದಲ ಏರ್ ಚೀಫ್ ಮಾರ್ಷಲ್ ಹುದ್ದೆಗೆ ನೇಮಕ ಮಾಡಿ ಬಡ್ತಿ ನೀಡಲಾಗಿತ್ತು.  2002ರಲ್ಲಿ ಸಿಂಗ್ ಅವರಿಗೆ ಫೈವ್ ಸ್ಟಾರ್ ಶ್ರೇಣಿಗೆ ಬಡ್ತಿ ನೀಡಲಾಗಿತ್ತು.
SCROLL FOR NEXT