ಸಾಂದರ್ಭಿಕ ಚಿತ್ರ 
ದೇಶ

ದೇಶದಲ್ಲಿ ಸಾಧಾರಣ ಮುಂಗಾರು ಸಾಧ್ಯತೆ: ಹವಾಮಾನ ಇಲಾಖೆ

ದೇಶಾದ್ಯಂತ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ನೈಋತ್ಯ ಮುಂಗಾರು ಸಾಧಾರಣವಾಗಿರಲಿದ್ದು, ಈ ಬಾರಿಯ ಮುಂಗಾರು ದೀರ್ಘಾವಧಿ ಸರಾಸರಿ....

ನವದೆಹಲಿ: ದೇಶಾದ್ಯಂತ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ನೈಋತ್ಯ ಮುಂಗಾರು ಸಾಧಾರಣವಾಗಿರಲಿದ್ದು, ಈ ಬಾರಿಯ ಮುಂಗಾರು ದೀರ್ಘಾವಧಿ ಸರಾಸರಿ ಶೇಕಡ 96 ರಷ್ಟಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಭೂವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ ರಾಜೀವನ್ ನಾಯರ್, 1951ರಿಂದ 2000ದ ಅವಧಿಯಲ್ಲಿ ಭಾರತದ ಒಟ್ಟಾರೆ ಮಳೆಗಾಲದ ಸರಾಸರಿ 89 ಸೆಂಟಿಮೀಟರ್ ಇದೆ. ಮಳೆಗಾಲದ ಉತ್ತರಾರ್ಧದಲ್ಲಿ ತೀವ್ರತೆ ಕಡಿಮೆಯಾಗಿ ಮುಂಗಾರು ಕ್ಷೀಣಿಸಲಿದೆ ಎಂದರು.
ಪೆಸಿಫಿಕ್ ಮತ್ತು ಹಿಂದೂ ಮಹಾ ಸಾಗರದ ಮೇಲಿನ ಸಮುದ್ರ ಮಟ್ಟದ ತಾಪಮಾನ ಭಾರತದ ಮುಂಗಾರಿನ ಮೇಲೆ ಭಾರೀ ಪರಿಣಾಮ ಬೀರಲಿದ್ದು ಈ ಬಗ್ಗೆ ನಿರಂತರ ನಿಗಾ ವಹಿಸಲಾಗಿದೆ.
2019ರ ಮುಂಗಾರು ಋತುವಿನಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಸಮ ಹಂಚಿತ ಮಳೆಯಾಗಲಿದ್ದು ರೈತರಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
2019ರ ಜೂನ್ ಮೊದಲ ವಾರದಲ್ಲಿ ಎರಡನೇ ಹಂತದ 2019ರ ಮುಂಗಾರು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಲಿದೆ ಎಂದರು. 
ಇದಕ್ಕೂ ಮುನ್ನ ಖಾಸಗಿ ಹವಮಾನ ಸಂಸ್ಥೆ, ಈ ವರ್ಷ ಮುಂಗಾರು ಮಳೆ ಸಾಕಷ್ಟು ಕೊರತೆಯಾಗಲಿದೆ ಎಂದು ವರದಿ ಮಾಡಿತ್ತು. ಇದು ರೈತ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಭಾರತೀಯ ಹವಾಮಾನ ಇಲಾಖೆ ಆತಂಕವನ್ನು ದೂರ ಮಾಡಿದ್ದು ಮುಂಗಾರು ಸಾಧಾರಣವಾಗಿರಲಿದೆ ಎಂಬ ಮುನ್ಸೂಚನೆ ನೀಡಿರುವುದು ರೈತ ಸಮುದಾಯಕ್ಕೆ ನಿರಾಳತೆ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!