ದೇಶ

ಸಿಜೆಐ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮಹಿಳೆಯ ಪತ್ರದಲ್ಲಿರುವುದೇನು?

Raghavendra Adiga
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಮೇಲೆ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದೆ. ಈ ಸಂಬಂಧ ವಿಶೇಷ ವಿಚಾರಣೆ ನಡೆಸಿದ ಗೊಗೋಯ್ ನೇತೃತ್ವದ ಮೂವರು ಸದಸ್ಯರ ಪೀಠ ಆರೋಪಗಳ ಗಂಭೀರತೆಗೆ ಸಾಕ್ಷಗಳಿಲ್ಲ ಎಂದಿದೆ.
ಮಹಿಳೆಯೊಬ್ಬರು ಪ್ರಮಾಣೀಕರಿಸಿದ ಅಫಿಡವಿಟ್ ನಲ್ಲಿ  22  ನ್ಯಾಯಾಧೀಶರಿಗೆ ತಮ್ಮ ಮೇಲೆ ಗೊಗೋಯ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬರೆದು ತಿಳಿಸಿದ್ದರು.35 ವರ್ಷ ವಯಸ್ಸಿನ ಮಹಿಳೆ ಜಸ್ಟೀಸ್ ಗೊಗೊಯ್ ಅವರ ನ್ಯಾಯಾಲಯದಲ್ಲಿ ಅಕ್ಟೋಬರ್ 2018ರವರೆಗೆ ಸುಮಾರು ಎರಡು ವರ್ಷಗಳ ಕಾಲ ನ್ಯಾಯಾಲಯದ ಕಿರಿಯ ಸಹಾಯಕಿಯಾಗಿ ಕೆಲಸ ಮಾಡಿದ್ದರು.  ಕಳೆದ ವರ್ಷ ಜಸ್ಟೀಸ್ ಗೊಗೊಯ್ ಅವರ  ಗೃಹ ಕಛೇರಿಯಲ್ಲಿ ಅಕ್ಟೋಬರ್ 10, 11ರಂದು ಕಿರುಕುಳ ಘಟನೆ ನಡೆದಿದೆ
ಆದರೆ ಮಹಿಳೆ ಆರೋಪ ಮಾಡಿದ ನಂತರ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಅಲ್ಲದೆ  ಅವಳ ಪತಿ ಮತ್ತು ಸೋದರಳಿಯನ್ನು ದೆಹಲಿಯ ಪೊಲೀಸರು ಅಮಾನತುಗೊಳಿಸಿದರು.ಕೆಳ ನ್ಯಾಯಾಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸೋದರಳಿಯನ್ನೂ  ಸೇವೆಯಿಂದ ವಜಾಗೊಳಿಸಲಾಗಿದೆ.
ಇದಷ್ಟೇ ಅಲ್ಲದೆ ಆಕೆಯನ್ನು ಲಂಚ ಪ್ರಕರಣಲ್ಲಿ ಬಂಧಿಸಲಾಗಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದೆ.
ಇಂದು ಈ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್ ಇದು "ಆಧಾರರಹಿತ ಆರೋಪ" ಎಂದು ಹೇಳಿದೆ.ಮಹಿಳೆ ಮಾಡಿದ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತ.  ಎಂದು ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಸಂಜೀವ್ ಸುಧಾಕರ ಕಲ್ಗೋನ್ಕರ್ ಹೇಳಿದ್ದಾರೆ."ಇದು ಒಂದು ಅಪರೂಪದ ಆರೋಪವಾಗಿದೆ," ಎಂದು ಅವರು ಹೇಳಿದರು.
SCROLL FOR NEXT