ದೇಶ

ಒಂದೆಡೆ ವರ್ಗಾವಣೆ, ಇನ್ನೊಂದೆಡೆ 'ವೀರ ಚಕ್ರ' ಪ್ರಶಸ್ತಿಗೆ ಅಭಿನಂದನ್ ಹೆಸರು ಶಿಫಾರಸು!

Vishwanath S
ನವದೆಹಲಿ: ಭಾರತೀಯ ವಾಯುಸೇನೆಯ ಶ್ರೀನಗರ ವಾಯುನೆಲೆಯಿಂದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಇದರ ಮಧ್ಯೆ ಭಾರತೀಯ ವಾಯುಸೇನೆ ವೀರ ಚಕ್ರ ಪ್ರಶಸ್ತಿಗೆ ಅಭಿನಂದನ್ ಅವರ ಹೆಸರನ್ನು ಶಿಫಾರಸು ಮಾಡಿದೆ. 
ಯುದ್ಧಕಾಲದಲ್ಲಿ ಅಪ್ರತಿಮ ಸಾಹಸಕ್ಕೆ ಯೋಧರಿಗೆ ಪರಮವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಅದೇ ರೀತಿ ಬಾಲಾಕೋಟ್ ವಾಯುದಾಳಿ ಬಳಿಕ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶಕ್ಕೆ ತಡೆಯೊಡ್ಡಿದ್ದು ಅಲ್ಲದೆ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಅವರಿಗೆ ವೀರ ಚಕ್ರ ಪ್ರಶಸ್ತಿ ನೀಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. 
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಅಭಿನಂದನ್ ಅವರನ್ನು ಉಗ್ರರು ಟಾರ್ಗೆಟ್ ಮಾಡುವ ಆತಂಕ ಹಿನ್ನೆಲೆಯಲ್ಲಿ ಅವರನ್ನು ಪಶ್ಚಿಮ ವಲಯಕ್ಕೆ ನಿಯೋಜಿಸಲಾಗಿದೆ. ಇದು ಸಹ ಪಾಕಿಸ್ತಾನದ ಗಡಿಯಲ್ಲಿ ಪ್ರಮುಖ ವಾಯುನೆಲೆಯಾಗಿದೆ.
SCROLL FOR NEXT