ದೇಶ

ಸಿಜೆಐ ವಿರುದ್ದ ಲೈಂಗಿಕ ಕಿರುಕುಳ ಆರೋಪ ವಿಚಾರಣೆಗೆ ಸುಪ್ರೀಂ ಸಮ್ಮತಿ

Srinivas Rao BV
ನವದೆಹಲಿ: ದೇಶದ ಮುಖ್ಯ ನ್ಯಾಯಮೂರ್ತಿ ಅವರ ವಿರುದ್ಧ  ಸುಪ್ರೀಂ ಕೋರ್ಟ್‌ನ  ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು  ಮಾಡಿರುವ ಲೈಂಗಿಕ ಕಿರುಕುಳ ಆರೋಪ  ಕುರಿತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್  ನಿರ್ಧರಿಸಿದೆ.
ಆರೋಪಗಳ ಕುರಿತ  ಮತ್ತೊಂದು ನ್ಯಾಯಪೀಠ ವಿಚಾರಣೆ ನಡೆಸಲಿದೆ ಎಂದು  ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ  ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಪೀಠ ಹೇಳಿದೆ.
 ಮುಖ್ಯ ನ್ಯಾಯಮೂರ್ತಿ  ಅವರು  ತಮ್ಮ  ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂಬ  ಮಾಜಿ ಮಹಿಳಾ ಸಿಬ್ಬಂದಿಯ ಆರೋಪ ಸಂಬಂಧ  ಕೆಲವು ನಿರ್ದಿಷ್ಟ ಮಾಧ್ಯಮಗಳು ಪ್ರಕಟಿಸಿದ್ದ ವರದಿ ಆಧಾರದ ಮೇಲೆ  ನ್ಯಾಯಪೀಠ ಸ್ವಯಂ ಪ್ರೇರಿತವಾಗಿ      ವಿಚಾರಣೆ ನಡೆಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ವಿಷಯ ಪ್ರಸ್ತಾಪಿಸಿ,  ಇದೊಂದು  ಗಂಭೀರ ಹಾಗೂ ಸಾರ್ವಜನಿಕ ಮಹತ್ವದ ವಿಷಯ ಎಂದು ಉಲ್ಲೇಖಿಸಿದಾಗ ನ್ಯಾಯಪೀಠ  ವಿಷಯದ ವಿಚಾರಣೆ ನಡೆಸಿತು. ಆದರೆ, ಮುಖ್ಯನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಆರೋಪಗಳ ಸಂಬಂಧ ಯಾವುದೇ ಆದೇಶ ಹೊರಡಿಸಲಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸಲು ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕೆಂದು  ಸೂಚಿಸಿತು. ಆರೋಪಗಳು ಆಧಾರ ರಹಿತ ಎಂದು  ಮುಖ್ಯ ನ್ಯಾಯಮೂರ್ತಿ ಹೇಳಿದರು.
SCROLL FOR NEXT