ದೇಶ

ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮುಂದಾದ ಗುರುಗ್ರಾಮದ 72 ಗ್ರಾಮದ ಜನತೆ!

Srinivas Rao BV
ಗುರುಗ್ರಾಮ: ಗುರುಗ್ರಾಮದ ಐಎಂಟಿ ಮನೇಸರ್ ಪ್ರದೇಶದ 72 ಗ್ರಾಮದ ಜನತೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. 
ಕೈಗಾರಿಕಾ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಂಡ ಭೂಮಿಗೆ ನೀಡಿದ್ದ ಪರಿಹಾರದ ಮೊತ್ತದಲ್ಲಿ 35 ಲಕ್ಷ ರೂಪಾಯಿ ವಾಪಸ್ ಪಡೆಯುವುದಾಗಿ ಹರ್ಯಾಣದ ಕೈಗಾರಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ರೈತರಿಗೆ ನೊಟೀಸ್ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ 72 ಗ್ರಾಮದ ಜನತೆ ಚುನಾವಣೆ ಬಹಿಷ್ಕರಿಸಲು ಚಿಂತನೆ ನಡೆಸಿದ್ದಾರೆ.
ಫೆ.08 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನು ಪಾಲಿಸಲು ನೊಟೀಸ್ ಜಾರಿಗೊಳಿಸಲಾಗಿದೆ. ಈ ಸಂಬಂಧ ಏ.21 ರಂದು ನಡೆದ ಮಹಾಪಂಚಾಯತ್ ನಲ್ಲಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. 
SCROLL FOR NEXT