ದೇಶ

ಮಮತಾ ದೀದಿ ನನಗೆ ಪ್ರತಿವರ್ಷ ಕುರ್ತಾ, ಸ್ವೀಟ್ಸ್ ಕಳಿಸುತ್ತಾರೆ, ವಿರೋಧ ಪಕ್ಷಗಳಲ್ಲಿ ಸಾಕಷ್ಟು ಗೆಳೆಯರಿದ್ದಾರೆ: ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ ನೆನಪಾಗುವುದು ರಾಜಕೀಯ, ಬಿಜೆಪಿ, ಆರ್ ಎಸ್ಎಸ್, ವಿರೋಧ ಪಕ್ಷಗಳ ಟೀಕೆ, ಮಾತುಗಳು ಇತ್ಯಾದಿ...ಇತ್ಯಾದಿ.
ಆದರೆ ಬುಧವಾರ ಬೆಳ್ಳಂಬೆಳಗ್ಗೆ ಇವೆಲ್ಲವುಗಳಿಂದ ದೂರವುಳಿದು ಆರಾಮ ಮನಸ್ಥಿತಿಯಲ್ಲಿ ಸುಮಾರು 1 ಗಂಟೆ ಕಾಲ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಈ ಮೂಲಕ ಮೋದಿಯವರ ಇನ್ನೊಂದು ಮುಖ ಭಾರತೀಯರಿಗೆ ಮತ್ತು ಜಗತ್ತಿಗೆ ಪರಿಚಯವಾಗಿದೆ. ದೆಹಲಿಯ ಪ್ರಧಾನಿ ನರೇಂದ್ರ ಮೋದಿ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸುಂದರವಾದ ಪ್ರಕೃತಿ ನಡುವೆ ಚಿಲಿಪಿಲಿ ಕೂಗುವ ಹಕ್ಕಿಯ ಸ್ವರದ ಮಧ್ಯೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ವಿರಾಮವಾಗಿ ಕುಳಿತು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದು ಸಂಪೂರ್ಣ ರಾಜಕಿಯೇತರ ಸಂದರ್ಶನವಾಗಿತ್ತು.
ಪ್ರಧಾನಿಯವರ ಮಾತುಗಳ ಪ್ರಮುಖ ಸಾರಾಂಶಗಳು ಇಂತಿವೆ:
-ಸಿಟ್ಟು ಮನುಷ್ಯನ ಸ್ವಭಾವಗಳಲ್ಲಿ ಒಂದು, ಆದರೆ ನನಗೆ ಯಾವತ್ತೂ ಸಿಟ್ಟು ಬರುವುದಿಲ್ಲ, ಸಿಟ್ಟು ಮನುಷ್ಯನಲ್ಲಿ ಋಣಾತ್ಮಕ ಅಂಶವನ್ನು ಹರಡುತ್ತದೆ.
-ಇಷ್ಟು ದೀರ್ಘ ಸಮಯದವರೆಗೆ ಪ್ರಧಾನಿಯಾಗಿದ್ದೇನೆ ಆದರೆ ನನಗೆ ಒಂದು ಬಾರಿಯೂ ಕೋಪ ತೋರ್ಪಡಿಸುವ ಪರಿಸ್ಥಿತಿ ಎದುರಾಗಿಲ್ಲ. ನಾನು ಕಠಿಣ ಹಾಗೂ ಶಿಸ್ತಿನ ವ್ಯಕ್ತಿ ಹೀಗಂತ ಯಾವತ್ತಿಗೂ, ಯಾರಿಗೂ ಅವಮಾನ ಮಾಡುವಂತೆ ನಡೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಯಾರಿಗಾದರೂ ಯಾವುದಾದರೂ ಕೆಲಸ ನೀಡಿದ್ದರೆ ಅದರಲ್ಲಿ ನಾನು ಕೂಡಾ ಪಾಲುದಾರನಾಗಲು ಪ್ರಯತ್ನಿಸುತ್ತೇನೆ. ನಾನು ಕಲಿಯುತ್ತೇನೆ ಹಾಗೂ ಇತರರಿಗೆ ಕಲಿಸುತ್ತೇನೆ ಹೀಗೆ ತಂಡ ರಚಿಸುತ್ತಾ ಮುಂದೆ ಸಾಗುತ್ತೇನೆ. ಅತ್ಯಂತ ಕಠಿಣ ಶಿಸ್ತು ಒಳ್ಳೆಯದಲ್ಲ. ಹೀಗಾಗಿ ಅತಿ ಹೆಚ್ಚು ಕೆಲಸ ಮಾಡಿಸುವುದಿಲ್ಲ. ಆದರೆ ನಾನು ಕೂಡಾ ಕೆಲಸ ಮಾಡುತ್ತೇನೆ ಹೀಗಿರುವಾಗ ಜನರು ಕೂಡಾ ಮಾಡಬೇಕಾಗುತ್ತದೆ.
-ಯುವಕನಿದ್ದಾಗಿನಿಂದಲೇ ನಾನು ಒಂಟಿಯಾಗಿ ಬೆಳೆದವನು. ಕುಟುಂಬದಿಂದ ದೂರವಿರಲು ಅಭ್ಯಾಸವಾಯಿತು. ನಂತರದ ದಿನಗಳಲ್ಲಿ ನನ್ನ ತಾಯಿಯಲ್ಲಿ ನನ್ನ ಜೊತೆ ಬಂದು ಇರು ಎಂದು ಹೇಳಿದರೂ ಕೇಳುತ್ತಿರಲಿಲ್ಲ. ತಾಯಿ ತನ್ನ ಗ್ರಾಮದಲ್ಲಿರಲು ಬಯಸುತ್ತಾಳೆ. ನನಗೆ ನನ್ನ ತಾಯಿ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.ನಾನು ತಾಯಿಗೆ ಹಣ ಕಳುಹಿಸುತ್ತಿಲ್ಲ, ನಾನು ಮನೆಗೆ ಹೋದಾಗ ಈಗಲೂ ತಾಯಿಯೇ ನನಗೆ ಹಣ ಕೊಡುತ್ತಾರೆ.
-ನನ್ನ ಅತಿಯಾದ ಆತ್ಮವಿಶ್ವಾಸವೇ ನನಗೆ ದೊಡ್ಡ ಸಮಸ್ಯೆ.
SCROLL FOR NEXT