ದೇಶ

ಭಯೋತ್ಪಾದನೆ ಮುಕ್ತ ಬಾರಾಮುಲ್ಲಾದಲ್ಲಿ ಮತ್ತೆ ಉಗ್ರವಾದ ಪ್ರಾರಂಭಕ್ಕೆ ಯತ್ನಿಸುತ್ತಿದ್ದ ಉಗ್ರನ ಬಂಧನ!

Srinivas Rao BV
ಜನವರಿ ತಿಂಗಳಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ಮುಕ್ತವಾದ ಮೊದಲ ಜಿಲ್ಲೆ ಬಾರಾಮುಲ್ಲಾದಲ್ಲಿ ಏ.24 ರಂದು ಬಂಧಿಸಲಾಗಿದೆ. ಬಂಧಿತ ಉಗ್ರ ಮೊಹಮ್ಮದ್ ವಕಾರ್ ಬಾರಾಮುಲ್ಲಾದಲ್ಲಿ ಮತ್ತೆ ಭಯೋತ್ಪಾದನೆಯನ್ನು ಪ್ರಾರಂಭಿಸಲು ಯತ್ನಿಸುತ್ತಿದ್ದ. 
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮೊಹಮ್ಮದ್ ವಾಕರ್, 2017 ರ ಜುಲೈ ನಲ್ಲಿ ಗಡಿ ನುಸುಳು ಒಳಬಂದಿರುವ ಲಷ್ಕರ್-ಎ-ತೈಯ್ಬಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನಾಗಿದ್ದಾನೆ. 
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊಹಲ್ಲಾ ಮಿಯಾನಾದ ನಿವಾಸಿಯಾಗಿರುವ  ಮೊಹಮ್ಮದ್ ವಾಕರ್ ಗೆ, "ಕಾಶ್ಮೀರದಲ್ಲಿ ಮುಸ್ಲಿಮರಿಗೆ ನಮಾಜ್ ಮಾಡುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ, ಅವರ ಮನೆಗಳನ್ನು ನಾಶ ಮಾಡಲಾಗುತ್ತಿದೆ. ಕಾಶ್ಮೀರದಿಂದ ಮುಸ್ಲಿಮರನ್ನು ಹೊರಕಳಿಸಲಾಗುತ್ತಿದೆ" ಎಂಬ ತಪ್ಪು ಮಾಹಿತಿ ನೀಡಿ ಭಯೋತ್ಪಾದನೆ ನಡೆಸಲು ಉತ್ತೇಜಿಸಲಾಗಿತ್ತು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. 
ಕಾಶ್ಮೀರದಲ್ಲಿ ನನಗೆ ಹೇಳಿದ ರೀತಿಯ ಪರಿಸ್ಥಿತಿ ಇಲ್ಲ ಎಂಬುದು ಆ ನಂತರ ತಿಳಿಯಿತು ಎಂದು ಪೊಲೀಸ್ ವಿಚಾರಣೆ ವೇಳೆ ಉಗ್ರ ಮೊಹಮ್ಮದ್ ವಾಕರ್ ಹೇಳಿದ್ದಾನೆ. 
SCROLL FOR NEXT