ದೇಶ

ಭಾರತೀಯ ಭೂಸೇನೆಗೆ ಮಹಿಳಾ ಸೈನಿಕರ ನೇಮಕಾತಿ ಪ್ರಕ್ರಿಯೆ ಆರಂಭ

Sumana Upadhyaya
ನವದೆಹಲಿ: ಮಹಿಳೆಯರ ಹೊಸ ಅವಕಾಶ ಕಲ್ಪಿಸಲು ಇದೀಗ ಭಾರತೀಯ ಸೇನೆ ಮಹಿಳಾ ಸೈನಿಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳೆಯರ ನೇಮಕಕ್ಕೆ ಆನ್ ಲೈನ್ ದಾಖಲಾತಿಯನ್ನು ಭಾರತೀಯ ಸೇನೆ ಇಂದು ಆರಂಭಿಸಿದೆ.
ಭಾರತೀಯ ಸೇನಾಪಡೆಯಲ್ಲಿ ಮಹಿಳಾ ಸೈನಿಕರ ನೇಮಕಾತಿ ಪ್ರಮುಖ ನಿರ್ಧಾರವಾಗಿದ್ದು ಇದೇ ಮೊದಲ ಸಲವಾಗಿದೆ. ಇಲ್ಲಿಯವರೆಗೆ ಅಧಿಕಾರಿ ಹುದ್ದೆಗಳಿಗೆ ಮಾತ್ರ ಮಹಿಳೆಯರನ್ನು ಸೇನೆಯಲ್ಲಿ ನೇಮಿಸಲಾಗುತ್ತಿತ್ತು.
ಮಹಿಳೆಯರನ್ನು ಜವಾನರಾಗಿ ನೇಮಿಸಿಕೊಳ್ಳಲು ನೇಮಕಾತಿ ಪ್ರಕ್ರಿಯೆಗೆ ಇಂದು ಆನ್ ಲೈನ್ ದಾಖಲಾತಿ ಕಾರ್ಯ ಆರಂಭವಾಗಿದ್ದು ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜೂನ್ 8 ಆಗಿದೆ. ಭಾರತೀಯ ಸೇನೆಯ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅಧಿಕಾರ ವಹಿಸಿಕೊಂಡ ಮೇಲೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಮಿಲಿಟರಿ ಪೊಲೀಸ್ ಪಡೆಯ ಒಟ್ಟು ಸಂಖ್ಯೆಯಲ್ಲಿ ಶೇಕಡಾ 20ರಷ್ಟು ಮಹಿಳೆಯರನ್ನು ಶ್ರೇಣಿ ಮಾದರಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಕ್ರಿಮಿನಲ್ ಕೇಸುಗಳನ್ನು ತನಿಖೆ ಮಾಡುವುದರಿಂದ ಹಿಡಿದು ಅಗತ್ಯವಿರುವಲ್ಲಿ ಸೇನಾ ಕಾರ್ಯಾಚರಣೆಗೆ ಸಹಾಯ ಮಾಡುವುದು ಮಹಿಳಾ ಸೈನಿಕರ ಪಾತ್ರವಾಗಿರುತ್ತದೆ.
SCROLL FOR NEXT