ಗೋವಾ: ಹೋಟೆಲ್ ನಲ್ಲಿ ಪ್ರವಾಸಿ ಮಹಿಳೆಯ ಮೃತದೇಹ ಪತ್ತೆ
ಹೋಟೆಲ್ ನ ಕೊಠಡಿವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಇಂದು ಹೇಳಿದ್ದಾರೆ.
ಗೋವಾ: ಹೋಟೆಲ್ ನ ಕೊಠಡಿವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಇಂದು ಹೇಳಿದ್ದಾರೆ.
ಮೃತ ಮಹಿಳೆಯನ್ನು ಹಿಮಾಚಲ ಪ್ರದೇಶದ ನಿವಾಸಿ ಅಲ್ಕಾ ಸೈನಿ ಎಂದು ಗುರುತಿಸಲಾಗಿದೆ. ಆಕೆಯ ಬಾಯ್ ಫ್ರೆಂಡ್ ಸುಕುವಿಂದರ್ ಸಿಂಗ್ ಜೊತೆಗೆ ಗೋವಾಕ್ಕೆ ಆಗಮಿಸಿದ್ದ ಅಲ್ಕಾ ಸೈನಿ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದರು. ಏಪ್ರಿಲ್ 20 ರಂದು ಇಬ್ಬರು ಹೋಟೆಲ್ ಗೆ ಆಗಮಿಸಿರುವುದಾಗಿ ತಿಳಿದುಬಂದಿದೆ.
ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಅಲ್ಕಾ ಸೈನಿ ಮೃತಪಟ್ಟಿರುವ ಬಗ್ಗೆ ಹೋಟೆಲ್ ನ ಆಡಳಿತ ಮಂಡಳಿಯಿಂದ ಮಾಹಿತಿ ಪಡೆಯಲಾಯಿತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಮೊಬಿಲಿಮ್ ನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಅಂಜುನಾ ಠಾಣೆಯ ಇನ್ಸ್ ಪೆಕ್ಟರ್ ನವಲೇಶ್ ದೇಸಾಯ್ ಹೇಳಿದ್ದಾರೆ.
ಸೈನಿ ಬಾಯ್ ಫ್ರೆಂಡ್ ತಲೆ ಮರೆಸಿಕೊಂಡಿದ್ದು, ಅಂಜುನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.