ದೇಶ

ಬನಿಹಾಲ್ ಸ್ಫೋಟ ಪ್ರಕರಣ: ಪಿಎಚ್ ಡಿ ಪದವೀಧರ ಸೇರಿ ಆರು ಉಗ್ರರ ಬಂಧನ

Lingaraj Badiger
ಶ್ರೀನಗರ: ಕಳೆದ ತಿಂಗಳು ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪಿಎಚ್ ಡಿ ಪದವೀಧರ ಸೇರಿದಂತೆ ಆರು ಉಗ್ರರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 31 ರಂದು ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ ಎಂಬಲ್ಲಿ ಕಾರೊಂದನ್ನು ಸ್ಫೋಟಿಸಲಾಗಿತ್ತು. ಸಿಆರ್ ಪಿಎಫ್ ಬೆಂಗಾವಲು ವಾಹನವನ್ನು ಗುರಿಯಾಗಿಸಿ ಈ ದಾಳಿ ನಡೆದಿತ್ತು. ಪುಲ್ವಾಮಾ ಮಾದರಿಯಲ್ಲಿ ನಡೆದ ಈ ದಾಳಿ ವಿಫಲವಾಗಿತ್ತು. ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರು ಉಗ್ರರನ್ನು ಬಂಧಿಸಿದ್ದು, ಆ ಪೈಕಿ ಹಿಲಾಲ್ ಅಹ್ಮದ್ ಮಂಟೂ ಎಂಬಾತ ಪಿಎಚ್ ಡಿ ಪಧವೀಧರನಾಗಿದ್ದು, ನಿಷೇಧಿತ ಜಮಾತ್ ಇ ಇಸ್ಲಾಮಿ ಉಗ್ರ ಸಂಘಟನೆಯ ವಿದ್ಯಾರ್ಥಿ ಘಟಕದಲ್ಲಿ ಸಕ್ರಿಯನಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಂ.ಕೆ.ಸಿನ್ಹಾ ಅವರು ಹೇಳಿದ್ದಾರೆ.
ಬಂಧಿತ ಇತರೆ ಆರೋಪಿಗಳನ್ನು ಹಿಲಾಲ್ ಅಹ್ಮದ್ ಮಂಟೂ, ಉಮರ್ ಶಫಿ, ಅಖಿಬ್ ಶಾಹ್, ಶಾಹಿದ್ ವನಿ ಎಂದು ಗುರುತಿಸಲಾಗಿದೆ.
SCROLL FOR NEXT