ದೇಶ

ನವದೆಹಲಿ: ಜೋರ್ ಬಾಗ್ ನಿವಾಸ ತೆರವು ಮಾಡುವಂತೆ ಕಾರ್ತಿಗೆ ಇಡಿಯಿಂದ ನಿರ್ದೇಶನ

Nagaraja AB
ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಶಕ್ಕೆ ಪಡೆಯಲಾಗಿದ್ದ ಜೋರ್ ಬಾಗ್  ನಿವಾಸ ತೆರವು ಮಾಡುವಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ ನಿರ್ದೇಶನ ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ  ನ್ಯಾಯಾಧೀಶರ ಪ್ರಾಧಿಕಾರ ನೀಡಿರುವ ತೆರವು  ನೋಟಿಸ್ ನ್ನು ಕಾರ್ತಿ ಅವರಿಗೆ ಬುಧವಾರ ಸಂಜೆ ನೀಡಲಾಗಿದ್ದು,  ಆಸ್ತಿ ವಶಕ್ಕೆ ತೆಗೆದುಕೊಂಡಿರುವುದನ್ನು  ಅದರಲ್ಲಿ ಲಗತ್ತಿಸಲಾಗಿದೆ. 
ನವದೆಹಲಿ-3 ಜೋರ್ ಬಾಗ್ 115- ಎ ಬ್ಲಾಕ್ 172ಯಲ್ಲಿರುವ ಸ್ಥಿರಾಸ್ತಿಯನ್ನು ಕಳೆದ ವರ್ಷ ಆಕ್ಟೋಬರ್ 10 ರಂದು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿತ್ತು. 
2007ರಲ್ಲಿ 305 ಕೋಟಿ ರೂಪಾಯಿಗಳ ಅಕ್ರಮ ಐಎನ್ಎಕ್ಸ್ ಮೀಡಿಯಾ ಕೇಸಿನಲ್ಲಿ  ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು 3.5 ಕೋಟಿ ರೂ. ಕಿಕ್ ಪಡೆದ ಆರೋಪ  ಕಾರ್ತಿ ಚಿದಂಬರಂ ಮೇಲಿದೆ. 
SCROLL FOR NEXT