ದೇಶ

ಚುನಾವಣೆಗೆ ಮುನ್ನ 'ಪವರ್' ಪ್ಲಾನ್ ಮಾಡಿದ ಕೇಜ್ರಿವಾಲ್: 200 ಯೂನಿಟ್‌ ವರೆಗೆ ಉಚಿತ ವಿದ್ಯುತ್!

Raghavendra Adiga
ನವದೆಹಲಿ: 200 ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವ ಎಲ್ಲಾ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅಲ್ಲದೆ  201 ರಿಂದ 400 ಯುನಿಟ್ ವಿದ್ಯುತ್ ಬಳಸುವವರಿಗೆ ಶೇ 50 ರಷ್ಟು ಸಹಾಯಧನ ನೀಡುವುದಾಗಿಯೂ ಹೇಳಿದ್ದಾರೆ.
ವಿದ್ಯುತ್ ಕಂಪನಿಗಳು ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವುದರಿಂದ ಮತ್ತು ಮೂಲಸೌಕರ್ಯಗಳು ಸುಧಾರಿಸಿರುವುದರಿಂದ ವಿದ್ಯುತ್ ದರದಲ್ಲಿ ಇಳಿಕೆ ಕಂಡುಬಂದಿದೆ ಎಂದು ಕೇಜ್ರಿವಾಲ್ ಹೇಳಿದರು. "ದೆಹಲಿಯು ಭಾರತದಲ್ಲಿ ಅಗ್ಗದ ವಿದ್ಯುತ್ ಪಡೆಯುತ್ತದೆ. ದೆಹಲಿಯ ಜನರಿಗೆ 24 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ" ಎಂದು ಅವರು ಹೇಳಿದರು.
ದೆಹಲಿ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ  ಚುನಾವಣೆಗಳು ನಡೆಯಲಿದೆ.. ಈ ವರ್ಷದ ಆರಂಭದಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಜತೆಗೆ ಕೈಜೋಡಿಸುವ ಇರಾದೆ ಹೊಂದಿದ್ದ ಕೇಜ್ರಿವಾಲ್ ಕಡೆ ಗಳಿಗೆಯಲ್ಲಿ ದೇಶದಾದ್ಯಂತ ಯವ ರಾಜಕೀಯ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಲದಿರಲು ತೀರ್ಮಾನಿಸಿದ್ದರು.
SCROLL FOR NEXT