ದೇಶ

ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ಶಾಸಕರು ಮತ್ತು ಸಂಸದರಿಗೂ ಅನ್ವಯಿಸುತ್ತದೆ: ಸ್ಮೃತಿ ಇರಾನಿ

Nagaraja AB
ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ನಿರಂತರ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಇಂದು ಉತ್ತರಿಸಿದ್ದು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಕಾನೂನು ಚುನಾಯಿತ ಜನಪ್ರತಿನಿಧಿಗಳಾದ ಶಾಸಕರು, ಸಂಸತ್ ಸದಸ್ಯರಿಗೂ ಅನ್ವಯವಾಗಲಿದೆ ಎಂದು ಸ್ಪಷ್ಪಪಡಿಸಿದೆ.
ಲೋಕಸಭೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಸೂದೆ( ಪೋಕ್ಸೊ 2019) ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ, ಚುನಾಯಿತ ಶಾಸಕರು ಮತ್ತು ಸಂಸದರಿಗೆ ಈ ಕಾನೂನಿನಿಂದ ವಿನಾಯಿತಿ ನೀಡಲಾಗಿದೆ ಎಂದು ಎಲ್ಲಿಯೂ ಹೇಳಲಾಗುವುದಿಲ್ಲ ಎಂದು ತಿಳಿಸಿದರು.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕರು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂಬ ಕೆಲವು ಸಂಸದರ ಆರೋಪಗಳಿಗೆ ಈ ಮೂಲಕ ಉತ್ತರ ನೀಡಿದರು. 
ಮಹಿಳಾ ಸದಸ್ಯರೊಬ್ಬರು ಎತ್ತಿದ ವಿಷಯದ ಬಗ್ಗೆ ಪ್ರಸ್ತಾಪಿಸಿದ ಅವರು, ಉನ್ನಾವ್ ಅತ್ಯಾಚಾರ ಪ್ರಕರಣದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಸಂಸದರು ಮೇಜು ಕುಟ್ಟುವುದು ಅನಪೇಕ್ಷಿತವಾಗಿದೆ ಎಂದರು.ಕೇವಲ ಕೇಂದ್ರ ಸಚಿವೆಯಾಗಿರುವುದಕ್ಕಿಂತ ತಾಯಿಯಾಗಿ ತನ್ನ ಪ್ರತಿಕ್ರಿಯೆಯನ್ನು ತೃಣಮೂಲ ಕಾಂಗ್ರೆಸ್ಸಿನ ಶತಾಬ್ದಿ ರಾಯ್ ನಿರೀಕ್ಷಿಸಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದರು.
ಪೋಕ್ಸೊದಂತಹ ಯಾವುದೇ ಕಾನೂನಿಗೆ ಸಂಬಂಧಿಸಿದಂತೆ ಕೆಲವು ಘೋರ ಅಪರಾಧಗಳ ನಡೆದರೆ ಸಂಸತ್ತಿನ ಅನುಮೋದನೆಯನ್ನು ಹೊಂದಿರುವ ಸರಿಯಾದ ಕಾನೂನು ಇದೆ. ಸಾಕ್ಷ್ಯಗಳ ಆಧಾರದ ಮೇಲೆ ಮರಣದಂಡನೆಯನ್ನು ಖಂಡಿತವಾಗಿ ವಿಧಿಸಬಹುದು ಎಂದು ಸಚಿವರು ಹೇಳಿದರು.
SCROLL FOR NEXT