ಸಾಂದರ್ಭಿಕ ಚಿತ್ರ 
ದೇಶ

ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 62. 50 ರೂ. ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ - ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 62 ರೂಪಾಯಿ...

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ - ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 62 ರೂಪಾಯಿ 50 ಪೈಸೆ ಕಡಿಮೆಯಾಗಿದೆ. 
ಈ ಮೂಲಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ದರ ಒಟ್ಟು 163 ರೂ ತಗ್ಗಿದೆ. 
ಬೆಲೆ ಇಳಿಕೆಯಾದ ಪರಿಣಾಮ 14.2 ಕೆ.ಜಿ. ತೂಕದ ಸಿಲಿಂಡರ್ ಬೆಲೆ 574.50 ರೂ ಆಗಿದೆ. 
ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ ಕಳೆದ ಒಂದು ತಿಂಗಳಲ್ಲಿ 100.50 ರೂ ಕಡಿತ ಮಾಡಲಾಗಿದೆ ಎಂದು ಭಾರತೀಯ ತೈಲ ಕಂಪನಿ ಹೇಳಿಕೆ ತಿಳಿಸಿದೆ. ಎರಡು ತಿಂಗಳ ಅವಧಿಯಲ್ಲಿ 162 ರೂ ನಷ್ಟು ಬೆಲೆ ಇಳಿಕೆಯಾಗಿದೆ. 
ಪ್ರಸ್ತುತ ವಾರ್ಷಿಕ 12 ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದ್ದು, ಇದಕ್ಕೂ ಮೀರಿ ಹೆಚ್ಚು ಸಿಲಿಂಡರ್ ಅಗತ್ಯವಿರುವವರು ಸಬ್ಸಿಡಿ ರಹಿತವಾಗಿ ಖರೀದಿಸಬಹುದಾಗಿದೆ. ಅಲ್ಲದೇ ಅನೇಕ ಜನರು ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ ಬಿಟ್ಟುಕೊಟ್ಟಿದ್ದು, ಇಂತಹ ಗ್ರಾಹಕರಿಗೆ ದರ ಇಳಿಕೆಯಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...

CM ಡಿಕೆ ಶಿವಕುಮಾರ್ ವಕ್ತಿತ್ವ ವಜ್ರಕ್ಕಿಂತ ಕಠಿಣ, ಆದ್ರೆ ಹೃದಯ ಮೃದು: ನೂಣನವಿನಕೆರೆ ಶ್ರೀ ಅಚ್ಚರಿ ಹೇಳಿಕೆ

32 ವರ್ಷಗಳ ಪೊಲೀಸ್ ಶೋಧ ಅಂತ್ಯ; 1994ರ ಡಬಲ್ ಮರ್ಡರ್, ಡಕಾಯಿತಿ ಆರೋಪಿ ಕೊನೆಗೂ ಅರೆಸ್ಟ್! ಬಂಧನವೇ ರೋಚಕ

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್; ಸಿಡಿದೆದ್ದ VHP