ಲಖನೌ: ಜೂಜಿನ ಗೀಳಿಗೆ ಬಿದ್ದ ಪಾಪಿ ಪತಿಯೊರ್ವ ಕೈಯಲ್ಲಿದ್ದ ಹಣ ಸೋತ ನಂತರ ತನ್ನ ಹೆಂಡತಿಯನ್ನೇ ಜೂಜಿಗಿಟ್ಟು ಸೋತ್ತಿದ್ದು ಗೆದ್ದ ಸ್ನೇಹಿತರು ಸ್ನೇಹಿತನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ ಘಟನೆ ನಡೆದಿದೆ.
ಉತ್ತರ ಪ್ರದೇಶದ ಜಾನ್ಪುರದಲ್ಲಿ ಈ ಘಟನೆ ನಡೆದಿದೆ. ಜೂಜಿನಲ್ಲಿ ಗೆದ್ದ ಸ್ನೇಹಿತನ ಪತ್ನಿಯ ಮೇಲೆ ಎರಡು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಕಾಮುಕರ ಹಿಂಸೆಗೆ ನಲುಗಿದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆ.
ಈ ವೇಳೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ಸಂತ್ರಸ್ತ ಮಹಿಳೆ ನಂತರ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ತಕ್ಷಣ ಕೋರ್ಟ್ ಪೊಲೀಸರ ವಿರುದ್ಧ ಕಿಡಿಕಾರಿದ್ದು ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕಾಪಿಯನ್ನು ಕೋರ್ಟ್ ಗೆ ಸಲ್ಲಿಸುವಂತೆ ಆದೇಶಿಸಿದೆ.