ದೇಶ

ಆರ್ಟಿಕಲ್ 370 ರದ್ದುಗೊಳಿಸಿದ ರೀತಿಯನ್ನು ಪ್ರಶ್ನಿಸಿದ ಮಮತಾ, ಜಮ್ಮು-ಕಾಶ್ಮೀರ ನಾಯಕರ ಬಿಡುಗಡೆಗೆ ಆಗ್ರಹ

Srinivas Rao BV
ಆರ್ಟಿಕಲ್ 370 ರದ್ದುಗೊಳಿಸಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳ ನೇತಾರರನ್ನು ಬಿಡುಗಡೆಗೆ ಒತ್ತಾಯಿಸಿದ್ದಾರೆ. 
ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ, 
ಫಾರೂಕ್ ಅಬ್ದುಲ್ಲಾ ಸೇರಿದಂತೆ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿತ್ತು. 
ಮೆಹಬೂಬಾ ಮುಫ್ತಿ, ಅಬ್ದುಲ್ಲಾಗಳು ಭಯೋತ್ಪಾದಕರಲ್ಲ, ಅವರನ್ನು ಪ್ರತ್ಯೇಕಗೊಳಿಸುವುದು ಸೂಕ್ತವಲ್ಲ, ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಬೇಕೆಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆಯ ಬಗ್ಗೆಯೂ ಮಮತಾ ಬ್ಯಾನರ್ಜಿ, ತಮ್ಮಿಂದ ಮಸೂದೆಯನ್ನು ಬೆಂಬಲಿಸುವುದಕ್ಕೂ ಆಗುವುದಿಲ್ಲ, ವಿರೋಧಿಸುವುದೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮೋದಿ ಸರ್ಕಾರ ಆರ್ಟಿಕಲ್ 370 ಯನ್ನು ರದ್ದುಗೊಳಿಸಿದ ರೀತಿ ಹಾಗೂ ವಿಧಾನವನ್ನು ಮಾತ್ರ ತಾವು ಒಪ್ಪುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
SCROLL FOR NEXT