ನವದೆಹಲಿ: ಇನ್ನು ಮುಂದೆ ಎರಡು ಧ್ವಜ, ಎರಡು ಸಂವಿಧಾನಗಳಿರುವುದಿಲ್ಲ ಎನ್ನುವುದನ್ನು 370ನೇ ವಿಧಿ ರದ್ದತಿ ಉಪಕ್ರಮವು ಖಾತರಿಪಡಿಸುತ್ತದೆಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
370ನೇ ವಿಧಿ ಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು.ಅದರೊಡನೆ ಇತರೆ ಹಕ್ಕುಗಳನ್ನು, ತನ್ನದೇ ಆದ ಧ್ವಜ,ವನ್ನು ಹೊಂದಲು ಸಹ ಅವಕಾಶ ಕಲ್ಪಿಸಿತ್ತು.
ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗಾಗಿ ಕೇಂದ್ರ ಸರ್ಕಾರದ ಈ ನಿರ್ಧಾರವು ಕಾಶ್ಮೀರದಲ್ಲಿ ಎರಡನೇ ಧ್ವಜ, ಎರಡನೇ ಸಂವಿಧಾನ ಇರುವುದಕ್ಕೆ ಅವಕಾಶ ನೀಡುವುದಿಲ್ಲಎಂದು ಖಚಿತಪಡಿಸುತ್ತದೆ ಎಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಸೂದೆಗೆ ಅಂಗೀಕಾರ ಪಡೆದ ನಂತರ ಶಾ ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
"ಈ ನಿರ್ಧಾರವು ಏಕೀಕೃತ ಭಾರತಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಎಲ್ಲ ದೇಶಭಕ್ತರಿಗೆ ಸಲ್ಲಿಸಿದ ಗೌರವವಾಗಿದೆ. ಇಡೀ ರಾಷ್ಟ್ರಕ್ಕೆನಾನು ಅಭಿನಂದನೆ ಸಲ್ಲಿಸುತ್ತೇನೆ.ಇಂದು, ಮೋದಿ ಸರ್ಕಾರವು ದೀರ್ಘಕಾಲದ ದ ಐತಿಹಾಸಿಕ ತಪ್ಪನ್ನು ಸರಿಪಡಿಸಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು "ನಮ್ಮ ತಾಯಿನಾಡಿನ ಏಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವಲ್ಲಿ ಶಾ ಅವರ ಅಚಲ ಬದ್ಧತೆ" ಯನ್ನುಅಭಿನಂದಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics