ನರೇಂದ್ರ ಮೋದಿ 
ದೇಶ

370 ನೇ ವಿಧಿ ರದ್ದು ಸರ್ದಾರ್ ಪಟೇಲ್, ವಾಜಪೇಯಿ ಕನಸನ್ನು ನನಸಾಗಿಸಿದೆ: ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
"ನಾನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇಡೀ ರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ. ಕೆಲವು ವಿಷಯಗಳು ಜೀವಂತವಿರುವವರೆಗೂ  ಅವು ಎಂದಿಗೂ ಬದಲಾಗುವುದಿಲ್ಲ ಅಥವಾ ದೂರ ಹೋಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. 370 ನೇ ವಿಧಿ ಇದೇ ರೀತಿಯದಾಗಿತ್ತು." ಎಂದು ಪ್ರಧಾನಿ ಹೇಳಿದರು.
"ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಜೀ ಮತ್ತು ಕೋಟ್ಯಂತರ ದೇಶಭಕ್ತರ ಕನಸು ಈಡೇರಿದೆ.
"ನಾವು ಒಂದು ರಾಷ್ಟ್ರವಾಗಿ, ಒಂದು ಕುಟುಂಬವಾಗಿ, ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಸಹೋದರರು ಮತ್ತು ಸಹೋದರಿಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಮತ್ತು ಅವರ ಅಭಿವೃದ್ಧಿಗೆ ಇದು ಒಂದು ದೊಡ್ಡ ಅಡಚಣೆ ಇದ್ದಿತ್ತು, ಇದೀಗ ವಿಶೇಷ ಸ್ಥಾನಮಾನ ರದ್ದು ಆಗಿರುವುದರಿಂದ ಅವರೂ ದೇಶದ ಉಳಿದ ರಾಜ್ಯಗಳ ನಾಗರಿಕರಂತೆ ಅಭಿವೃದ್ದಿಯ ಹಾದಿಯಲ್ಲಿ ಮುಂದುವರಿಯಬಹುದು." "ಮೋದಿ ಹೇಳಿದರು.
"ವಿಶೇಷ ಸ್ಥಾನಮಾನದ ಕಾರಣ, ಜಮ್ಮು ಮತ್ತು ಕಾಶ್ಮೀರಕ್ಕೆ ನಿಜವಾಗಿ ಸಿಗಬೇಕಿದ್ದ ಅಭಿವೃದ್ಧಿ ಅವಕಾಶವನ್ನು ಪಡೆಯಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.
"ಈಗ, ಜಮ್ಮು ಮತ್ತು ಕಾಶ್ಮೀರಕ್ಕೂ ಭಾರತದ ಉಳಿದ ಭಾಗಗಳಂತೆ ಅಭಿವೃದ್ಧಿಯ ಫಲ ಸಿಗಲಿದೆ" ಎಂದು ಪ್ರಧಾನಿ ಹೇಳಿದರು.
ಜಮ್ಮು ಕಾಶ್ಮೀರ ಜನರು ಇತರ ರಾಜ್ಯಗಳಿಗೆ ಅನ್ವಯಿಸುವ ಕಾನೂನುಗಳು ಮತ್ತು ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿದ್ದರು. ಈಗ ಅವರು ಇತರ ರಾಜ್ಯಗಳ ಜನರಂತೆ ಆರೋಗ್ಯ ಮತ್ತು ಶಿಕ್ಷಣದ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ" ಎಂದು ಪ್ರಧಾನಿ ಹೇಳಿದರು.
"ಜಮ್ಮು ಮತ್ತು ಕಾಶ್ಮೀರವನ್ನು ನೇರವಾಗಿ ಕೇಂದ್ರ ಆಡಳಿತದಲ್ಲಿ ತರುವ ಬಗೆಗೆ ಚೆನ್ನಾಗಿ ಯೋಚಿಸಲಾಗಿದೆ. ಮತ್ತು ಇದು ಸ್ವಲ್ಪ ಸಮಯದವರೆಗೆ ಮುಂದುವರಿಯಲಿದೆ.
"ರಾಜ್ಯಪಾಲರ ಆಡಳಿತವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ತಂದಾಗಿನಿಂದ, ರಾಜ್ಯದ ಆಡಳಿತ ನಿರ್ವಾಹಕರು ಕೇಂದ್ರದೊಡನೆ ನೇರ ಸಂಪರ್ಕದಲ್ಲಿದ್ದಾರೆ., ಇದರಿಂದಾಗಿ ಉತ್ತಮ ಆಡಳಿತದ ಪರಿಣಾಮಗಳನ್ನು ನಾವಿಂದು ಕಾಣುತ್ತಿದ್ದೇವೆ.

"370 ನೇ ವಿಧಿ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮತ್ತು ಆಶ್ಚರ್ಯಕರ ಸಂಗತಿಯೆಂದರೆ, ಈ ವಿಧಿಯು ಜನರಿಗೆ ಹೇಗೆ ಪ್ರಯೋಜನವನ್ನು ನೀಡಿತು ಎಂಬುದನ್ನು ಯಾರೂ ನಿಜವಾಗಿಯೂ ಹೇಳಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು. 

ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಸ್ಥಳೀಯ ಪ್ರತಿನಿಧಿಗಳನ್ನು ಮೊದಲಿನಂತೆಯೇ ಆಯ್ಕೆ ಮಾಡುವುದಕ್ಕೆ ಅವಕಾಶವಿರಲಿದೆ ಎಂದು ಮೋದಿ ಹೇಳಿದ್ದಾರೆ.

"ಅವರು ಮುಕ್ತ ಮತ್ತು ನ್ಯಾಯಯುತವಾದ ಪಂಚಾಯತ್ ಚುನಾವಣೆಗಳನ್ನುಕಾಣಲಿದ್ದಾರೆ. ಅದೇ ರೀತಿ ವಿಧಾನಸಭಾ ಚುನಾವಣೆಗಳು ಸಹ ನಡೆಯಲಿವೆ. ಎರಡು-ಮೂರು ದಶಕಗಳಿಂದ ಬಾಕಿ ಇರುವ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಅನ್ನು ನೇಮಕ ಮಾಡುವಂತೆ ನಾನು ರಾಜ್ಯಪಾಲರನ್ನು ಒತ್ತಾಯಿಸುತ್ತೇನೆ" ಎಂದು ಪ್ರಧಾನಿ ಹೇಳಿದರು.

"ಜಮ್ಮು ಮತ್ತು ಕಾಶ್ಮೀರದ ಜನರಿಗೆ ಶೀಘ್ರದಲ್ಲೇ ಮುಕ್ತ ಮತ್ತು ನ್ಯಾಯಯುತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ದೊರಕಲಿದೆ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!