ನೀರಿಗೆ ತಳ್ಳಿದ ಕಾರು 
ದೇಶ

ಅಪ್ಪ ಜಾಗ್ವಾರ್​ ಕಾರು ಕೊಡಿಸಲಿಲ್ಲ ಎಂದು ಹೊಸ ಬಿಎಂಡಬ್ಲ್ಯು ಕಾರನ್ನೇ ನದಿಗೆ ತಳ್ಳಿದ ಪುತ್ರ!

ಪೋಷಕರು ತನ್ನ ಇಷ್ಟಕ್ಕೆ ವಿರುದ್ಧವಾಗಿ ಗಿಫ್ಟ್ ನೀಡಿದ್ದ ಹೊಸ ಬಿಎಂಡಬ್ಲ್ಯು ಕಾರನ್ನೇ ಯುವಕನೊಬ್ಬ ನದಿಗೆ ತಳ್ಳಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಚಂಡೀಗಢ: ಪೋಷಕರು ತನ್ನ ಇಷ್ಟಕ್ಕೆ ವಿರುದ್ಧವಾಗಿ ಗಿಫ್ಟ್ ನೀಡಿದ್ದ ಹೊಸ ಬಿಎಂಡಬ್ಲ್ಯು ಕಾರನ್ನೇ ಯುವಕನೊಬ್ಬ ನದಿಗೆ ತಳ್ಳಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಹರಿಯಾಣದ ಯಮುನಾನಗರದ ಯುವಕ ಈ ಕೃತ್ಯ ಎಸಗಿದ್ದು, ಈ ಯುವಕ ಜಾಗ್ವಾರ್​ ಕಂಪನಿಯ ಐಷಾರಾಮಿ ಕಾರು ಕೊಡಿಸುವಂತೆ ಪೋಷಕರಿಗೆ ಬೇಡಿಕೆ ಇಟ್ಟಿದ್ದ. ಆದರೆ ತಂದೆ ಜಾಗ್ವರ್ ಬದಲು ಬಿಎಂಡಬ್ಲ್ಯು ಕಾರು ಗಿಫ್ಟ್ ಕೊಡಿಸಿದ್ದರು. ಇದರಿಂದ ಆಕ್ರೋಶಗೊಂಡ ಯುವಕ ಅಪ್ಪ ಕೊಡಿಸಿದ ಬಿಎಂಡಬ್ಲ್ಯು ಐಷಾರಾಮಿ ಕಾರನ್ನು ನದಿಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೋರೂಂನಿಂದ ಕಾರನ್ನು ಪಡೆದುಕೊಂಡು ಮನೆಗೆ ತಂದ ಯುವಕ ಬಳಿಕ ಅದನ್ನು ಚಲಾಯಿಸಿಕೊಂಡು ಹೋಗಿ ಉಕ್ಕಿ ಹರಿಯುತ್ತಿದ್ದ ನದಿಯೊಳಗೆ ನೂಕಿದ್ದಾನೆ. ಅಲ್ಲದೆ ತನ್ನ ಈ ಕೃತ್ಯವನ್ನು ಮೊಬೈಲ್​ ಫೋನ್​ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ಇದೀಗ ವೈರಲ್​ ಆಗಿದೆ.

ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಬದಲು ನದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳಲ್ಲಿ ಸಿಲುಕಿಕೊಂಡಿತು. ಈ ಸಂದರ್ಭದಲ್ಲಿ ಯುವಕನಿಗೆ ಜ್ಞಾನೋದಯವಾಯಿತು ಅನಿಸುತ್ತದೆ. ತಕ್ಷಣವೇ ಆತ ನುರಿತ ಮುಳುಗುತಜ್ಞರ ಸಹಾಯದಿಂದ ಕಾರನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ. ಸದ್ಯ ಪೊಲೀಸರು ಯುವಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT