ದೇಶ

Watch Video: ಕೇರಳದಲ್ಲಿ ಒಂದಿಡೀ ಗ್ರಾಮವನ್ನೇ ನುಂಗಿದ ಮಳೆ! 6 ಶವಗಳ ಪತ್ತೆ, ಮಿಕ್ಕವರಿಗಾಗಿ ಶೋಧ

Raghavendra Adiga
ವೈನಾಡು: ದೇವಾಲಯ, ಮಸೀದಿ, ಅಂಚೆ ಕಚೇರಿ ಮತ್ತು ಪ್ಲಾಂಟೇಶನ್ ಕಂಪನಿಯ ಕ್ಯಾಂಟೀನ್‌ನೊಂದಿಗೆ ಸುಮಾರು 100 ಎಕರೆ ಚಹಾ ಎಸ್ಟೇಟ್ ಜಮೀನು- ಹೀಗೆ ನ್ನಾ ಜನವಸತಿ ಪ್ರದೇಶಗಳನ್ನು ಒಳಗೊಂಡಿದ್ದ ಕೇರಳದ ಪುದುಮಲೈ ಗ್ರಾಮವು ಗುರುವಾರ ನೀರಿನಲ್ಲಿ ಸಂಪೂರ್ಣ ಜಲಸಮಾಧಿಯಾಗಿದೆ. ಸುಂದರ ವೈನಾಡಿನ ಬೆಟ್ಟ ಪ್ರದೇಶದ ಪಟ್ಟಣ ಮೆಪ್ಪಾಡಿಯಿಂದ 11 ಕಿ.ಮೀ ದೂರದಲ್ಲಿದ್ದ ಈ ಗ್ರಾಮ ಕೇರಳದಲ್ಲಿ ವರುಣನ ರುದ್ರ ನರ್ತನಕ್ಕೆ ಆಹುತಿಯಾಗಿದೆ.
ಭೂಕುಸಿತದಿಂದ ಬದುಕುಳಿದ ಗ್ರಾಮಸ್ಥರೊಬ್ಬರು ಹೇಳಿದಂತೆ "ಪುದುಮಲೈಗ್ರಾಮ ಇನ್ನು ನೆನಪು ಮಾತ್ರ!" ಶುಕ್ರವಾರ ಇಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ ಇನ್ನೂ 15-20 ಜನ ಕೆಸರಿನಡಿ ಸಿಕ್ಕಿಕೊಂಡಿದ್ದಾರೆಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹ್ಯಾರಿಸನ್ಸ್ ಮಲಯಾಳಂ ಒಡೆತನದ 100 ಎಕರೆ ಚಹಾ ಎಸ್ಟೇಟ್ ಇಲ್ಲಿತ್ತು. ನೂರಾರು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. 
ಕಣ್ಣೂರಿನಿಂದ ಆಗಮಿಸಿದ ಸೇನಾ ತಂಡ ಸೇರಿದಂತೆ 80 ಸದಸ್ಯರ ರಕ್ಷಣಾ ಪಡೆ ನೇತೃತ್ವದ ಶೋಧ ಕಾರ್ಯಾಚರಣೆ ಶುಕ್ರವಾರ ಮುಂಜಾನೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಗಳಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
SCROLL FOR NEXT