ದೇಶ

ಅಕ್ರಮವಾಗಿ ದೇಶದೊಳಗೆ  ನುಗ್ಗುತ್ತಿದ್ದ 12 ಬಾಂಗ್ಲಾ ಪ್ರಜೆಗಳ ಬಂಧನ

Nagaraja AB

 ಕೊಲ್ಕತ್ತಾ: ಭಾರತ- ಬಾಂಗ್ಲಾ ಗಡಿಯಲ್ಲಿನ  ಬಿತಾರಿ ಹಾಗೂ ಹಕಿಪುರ ಪ್ರದೇಶಗಳಿಂದ ದೇಶದೊಳಗೆ ಅಕ್ರಮವಾಗಿ ನುಸುಳುತ್ತಿದ್ದ 12 ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

ಉತ್ತರ 24 ಪರಗಣದ ಬಿತಾರಿ, ಹರಿಪುರ ಮತ್ತು ದೊಬೊಲಿಯಾ ಪ್ರದೇಶದಲ್ಲಿನ ಪ್ರತ್ಯೇಕ ಪ್ರಕರಣಗಳಲ್ಲಿ ದೇಶದೊಳಗೆ ಕಾನೂನು ಬಾಹಿರವಾಗಿ ನುಗ್ಗುತ್ತಿದ್ದ  ಎಂಟು ಮಹಿಳೆಯರು ಹಾಗೂ ನಾಲ್ವರು ಪುರುಷರನ್ನು ಬಂಧಿಸಲಾಗಿದೆ ಎಂದು ಬಿಎಸ್ ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಬಾಂಗ್ಲಾದೇಶದ ಧರ್ಮ ಪ್ರಚಾರಕರ ಸಹಾಯದಿಂದ ದೇಶದೊಳಗೆ ನುಗ್ಗುತ್ತಿದ್ದಾಗಿ ಪ್ರಾಥಮಿಕ ತನಿಖೆ ವೇಳೆಯಲ್ಲಿ ಬಾಂಗ್ಲಾದೇಶಿ ಪ್ರಜೆಗಳು ಹೇಳಿದ್ದಾರೆ.

ಬಂಧಿತರನ್ನು ಮುಂದಿನ ಕಾನೂನು ಕ್ರಮಕ್ಕೆ ಗುರಿಪಡಿಸಲು  ಸಂಬಂಧಿತ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT