ದೇಶ

ಪ್ರಧಾನಿ ಮೋದಿ, ಶಾ 'ಅರ್ಜುನ- ಕೃಷ್ಣ'ರಂತೆ- ರಜನಿ ಗುಣಗಾನ

Nagaraja AB

ಚೆನ್ನೈ: ಸಂವಿಧಾನದ 370ನೇ ವಿಧಿ ರದ್ದತಿಗೂ ಮುನ್ನ ಹಾಗೂ ನಂತರ ಜಮ್ಮು- ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿದ  ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಸೂಪರ್ ಸ್ಟಾರ್ ರಜನಿಕಾಂತ್ ಹಾಡಿ ಹೊಗಳಿದ್ದಾರೆ.

ಮೋದಿ ಹಾಗೂ ಅಮಿತ್ ಶಾ ಅವರನ್ನು ಮಹಾಭಾರತದ ಅರ್ಜುನ ಮತ್ತು ಕೃಷ್ಣರಿಗೆ ರಜನಿಕಾಂತ್ ಹೊಲಿಕೆ ಮಾಡಿದ್ದಾರೆ. ಆದರೆ, ಇಬ್ಬರಲ್ಲಿ ಯಾರು ಅರ್ಜುನ, ಕೃಷ್ಣ  ಯಾರೆಂಬುದನ್ನು ಹೇಳಲಿಲ್ಲ, ಗುಟ್ಟಾಗಿಯೇ ಇಟ್ಟರು.

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಬರೆದಿರುವ Listening, Learning, and Leading ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿಂದು ಪಾಲ್ಗೊಂಡು ಮಾತನಾಡಿದ ಅವರು, ಕಾಶ್ಮೀರ ಮಿಷನ್ ಗಾಗಿ ಅಮಿತ್ ಶಾ ಅವರಿಗೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಅದನ್ನು ಅನುಷ್ಠಾನಗೊಳಿಸಿದ ರೀತಿಗೆ ಹ್ಯಾಟ್ಸ್ ಆಪ್ ಹೇಳಬೇಕು. ಸಂಸತ್ತಿನಲ್ಲಿ ಅವರು ಮಾತನಾಡಿದ ರೀತಿ ಅದ್ಬುತವಾಗಿತ್ತು ಎಂದು ಕೊಂಡಾಡಿದರು.

ಅಮಿತ್ ಶಾ ಹಾಗೂ ಮೋದಿ ಕೃಷ್ಣಾ ಅರ್ಜುನರಂತೆ ಎಂದು ಬಣ್ಣಿಸಿದ ರಜನಿಕಾಂತ್, ಕೃಷ್ಣ ಯಾರು, ಅರ್ಜುನ ಯಾರು ಎಂಬುದು ನಮ್ಮಗೆ ಗೊತ್ತಿಲ್ಲ. ಅವರಿಗೆ ಮಾತ್ರ ಗೊತ್ತು ಎಂದರು.ದೇಶ ಹಾಗೂ ಅಮಿತ್ ಶಾ ಅವರಿಗೆ ಒಳ್ಳೇಯದಾಗಲಿ ಎಂದು ಹಾರೈಸಿದರು. 

ಇನ್ನೂ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬಗ್ಗೆ ಮಾತನಾಡಿದ ರಜನಿಕಾಂತ್, ಆದ್ಯಾತ್ಮಿಕ ವ್ಯಕ್ತಿಯಾಗಿರುವ ವೆಂಕಯ್ಯನಾಯ್ಡು ಹೇಗೆ ರಾಜಕೀಯಕ್ಕೆ ಬಂದರು ಎಂಬುದು ಆಶ್ಚರ್ಯಕರವಾಗಿದೆ. ಅವರು ಸ್ನೇಹಿತರಿಗೆ ಒಳ್ಳೇಯ ಗೌರವ ನೀಡುತ್ತಾರೆ ಎಂದು ಹೇಳಿದರು.
ಅಮಿತ್ ಶಾ ಹಾಗೂ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

SCROLL FOR NEXT