ದೇಶ

ಮುಳುಗಡೆ ಭೀತಿಯಲ್ಲಿ ಚಂದ್ರಬಾಬುನಾಯ್ಡು ನಿವಾಸ, ಕುಟುಂಬ ಹೈದರಾಬಾದಿಗೆ ಸ್ಥಳಾಂತರ

Srinivas Rao BV

ವಿಜಯವಾಡ: ಕೃಷ್ಣ ನದಿಯ ಒಳಹರಿವು ಹೆಚ್ಚಾಗುತ್ತಿರುವ ಕಾರಣ ನದಿಯ ಬಳಿ ಇರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸ ಪ್ರವಾಹದ ಭೀತಿ ಎದುರಿಸುತ್ತಿದೆ.

ಈ ರಾತ್ರಿಯ ಹೊತ್ತಿಗೆ ಒಳಹರಿವು ಮತ್ತಷ್ಟು ಹೆಚ್ಚಾಗಿ ಮತ್ತು ಪ್ರವಾಹದ ನೀರು ನಾಯ್ಡು ನಿವಾಸಕ್ಕೆ ಅವರಿಸಿಕೊಳ್ಳುವ ಸಾಧ್ಯತೆಯ ಕಾರಣ ಅವರ ಕುಟುಂಬ ಹೈದರಾಬಾದಿಗೆ ತೆರಳಿದೆ.  

ನಾಯ್ಡು ಅವರ ನಿವಾಸ ಕೃಷ್ಣ ನದಿಯ ದಕ್ಷಿಣ ದಂಡೆಯಲ್ಲಿರುವ ನದಿಯಿಂದ ಕೇವಲ 50 ಮೀಟರ್ ದೂರದಲ್ಲಿ ಹಾಗೂ ಪ್ರಕಾಶಂ ಜಲಾಶದಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿದೆ. ಈ ನಡುವೆ ಪ್ರಕಾಶಂ, ಪುಲಿಚಿಂತಲಾ ಜಲಾಶದಿಂದ ಇಲ್ಲಿಯವರೆಗೆ 4.12 ಲಕ್ಷ ಕ್ಯೂಸೆಕ್ ನೀರು ಹರಿಯಬಿಡಲಾಗಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ, ನಾಯ್ಡು ಅವರ ಕುಟುಂಬದ ಕಾರುಗಳನ್ನು ಖಾಸಗಿ ರೆಸಾರ್ಟ್‌ಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ನಾಯ್ಡು ಅವರು ಈಗ ಸದ್ಯ ವಿಜಯವಾಡಲ್ಲಿ ಇಲ್ಲ ಎಂದು ಹೇಳಲಾಗಿದೆ. ಈ ನಡುವೆ ಪ್ರಕಾಶಂ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರಾದ  ಕೆ. ಕನ್ನಬಾಬು ಮತ್ತು ವಿ.ಶ್ರೀನಿವಾಸ್ ಅವರು ತಮ್ಮ ನಿವಾಸಕ್ಕೆ ಪ್ರವಾಹದ ನೀರು ಪ್ರವೇಶಿಸಲಿದೆ ಎಂಬ ಭೀತಿಯಿಂದ ನಾಯ್ಡು ಅವರು, ಕುಟುಂಬ ಹೈದರಾಬಾದಿಗೆ ತೆರಳಿದ್ದಾರೆ ಎಂದರು. 

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರುಗಳು ಎಸ್ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ನದಿಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಎಲ್ಲ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡಲು ತೀರ್ಮಾನಿಸಿವೆ ಎಂದು ಅವರು ಹೇಳಿದರು.

SCROLL FOR NEXT