ದೇಶ

ಶಬರಿಮಲೆ  ಆಯ್ಯಪ್ಪ ದೇಗುಲದ ಮುಖ್ಯ ಆರ್ಚಕರಾಗಿ ಸುಧೀರ್ ನಂಬೂದರಿ ನೇಮಕ

Lingaraj Badiger

ಶಬರಿಮಲೆ: ವಿಶ್ವವಿಖ್ಯಾತ  ಶಬರಿಮಲೆ ಅಯ್ಯಪ್ಪ ದೇಗುಲ ಮಾಸಿಕ ಪೂಜಾ ಕೈಂಕರ್ಯಗಳಿಗಾಗಿ ಶುಕ್ರವಾರ ಸಂಜೆ ಆಲಯದ ದ್ವಾರಗಳನ್ನು ತೆರೆಯಲಾಗಿದ್ದು, ಮುಂದಿನ ಒಂದು ವರ್ಷದ ಅವಧಿಗೆ ನೂತನ ಮುಖ್ಯ ಆರ್ಚಕರನ್ನಾಗಿ ಎ ಕೆ ಸುಧೀರ್ ನಂಬೂದರಿ ಅವರನ್ನುಆಯ್ಕೆಮಾಡಲಾಗಿದೆ. 

ಭಗವಾನ್ ಆಯ್ಯಪ್ಪ ಸ್ವಾಮಿ  ದೇಗುಲ ಹಾಗೂ ಮಾಳಿಕಾಪುರಂ ದೇವಿ ದೇವಾಲಯದ  ಗರ್ಭಗುಡಿಯ ಮುಂದೆ ಹಾಕಿದ್ದ ಲಾಟ್ ನಲ್ಲಿ ಮಕ್ಕಳಿಂದ ಚೀಟಿ ಎತ್ತಿಸುವ  ಮೂಲಕ ಮುಖ್ಯ ಆರ್ಚಕರನ್ನು ಆಯ್ಕೆ ಮಾಡಲಾಯಿತು.

ಮಲ್ಲಪುರಂ ಜಿಲ್ಲೆಯ ತಿರುವಯದ ಎ ಕೆ ಸುಧೀರ್ ನಂಬೂದರಿ ನವೆಂಬರ್ 17 ರಿಂದ ಜಾರಿಗೆ ಬರುವಂತೆ ಒಂದು ವರ್ಷ ಅವಧಿಗೆ ಮುಖ್ಯ ಆರ್ಚಕರನ್ನಾಗಿ ಆಯ್ಕೆ ಮಾಡಲಾಗಿದೆ.

ಎರ್ನಾಕುಲಂ ಎಂ.ಎಸ್. ಪರಮೇಶ್ವರನ್ ನಂಬೂದರಿ ಮಾಳಿಕಾಪುರಂ ದೇವಿ ದೇಗುಲದ ಮುಖ್ಯ ಆರ್ಚಕರನ್ನಾಗಿ  ಮುಂದಿನ ಒಂದು ವರ್ಷಕ್ಕಾಗಿ ಆಯ್ಕೆಮಾಡಲಾಗಿದೆ.

ಭಗವಾನ್ ಆಯ್ಯಪ್ಪ ದೇಗುಲ ಹಾಗೂ  ಮಾಳಿಕಾಪುರಂ ದೇವಿ ದೇಗುಲದಲ್ಲಿ ಕ್ರಮವಾಗಿ  ಇಬ್ಬರು ಮಕ್ಕಳ ಕೈಯಿಂದ ಲಾಟ್ ನಲ್ಲಿ ಚೀಟಿ ಎತ್ತಿಸುವ ಮೂಲಕ  ಮುಖ್ಯ ಅರ್ಚಕರನ್ನು ಆಯ್ಕೆ ಮಾಡಲಾಯಿತು.

ದೇಗಲಗಳ ಆರ್ಚಕರ ಆಯ್ಕೆ ಪ್ರಕ್ರಿಯೆಗೆ ಮುನ್ನ, ದೇವಾಲಯದ ತಂತ್ರಿ ಕಂದರಾರು ಮಹೇಶ್ವರಾರು ಮೋಹನರಾರು ಎರಡು ಬೆಳ್ಳಿ ಕುಂಡಗಳಲ್ಲಿ ಇರಿಸಲಾಗಿದ್ದ ಲಾಟ್ ಗಳಿಗೆ  ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. 

ಮುಖ್ಯ ಆರ್ಚಕರ ಆಯ್ಕೆ ಪ್ರಕ್ರಿಯೆಯನ್ನು ಕೇರಳ ಹೈಕೋರ್ಟ್ ನಿಂದ ನೇಮಕಗೊಂಡಿದ್ದ  ವಿಶೇಷ ಆಯುಕ್ತ  ಎಂ. ಮನೋಜ್ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

ಆದರೆ, ಎರಡೂ ದೇಗುಲಗಳ ಮುಖ್ಯ ಆರ್ಚಕರ  ಸೇವಾ ಸ್ವೀಕಾರ ಸಮಾರಂಭ, ಮುಂದಿನ ವಾರ್ಷಿಕ ಮಂಡಲಂ ಮಕರವೀಳಕ್ಕು ಉತ್ಸವ ಆರಂಭಗೊಳ್ಳುವುದಕ್ಕೆ  ಮುನ್ನ ಅಂದರೆ, ನವೆಂಬರ್ 16ರಂದು ಸಂಜೆ ನಡೆಯಲಿದೆ.

ಇಬ್ಬರೂ ಮುಖ್ಯ ಆರ್ಚಕರನ್ನು ಸೇವೆಗೆ ನಿಯೋಜಿಸುವ ಮುನ್ನ ತಂತ್ರಿ ಕಂದರಾರು    ಹಾಗೂ ನಿರ್ಗಮನಗೊಳ್ಳಲಿರುವ ಮುಖ್ಯ ಆರ್ಚಕರು ಆಲಯದ ವಿಶೇಷ ಸಂಪ್ರದಾಯಗಳ ಬಗ್ಗೆ ತರಬೇತಿ ಒದಗಿಸಲಿದ್ದಾರೆ.

ಟ್ರಾವಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಅಧ್ಯಕ್ಷ ಎ. ಪದ್ಮಕುಮಾರ್,  ಮಂಡಳಿ ಸದಸ್ಯರಾದ ಕೆ.ಪಿ. ಸಂಕರದಾಸ್ ಹಾಗೂ ಎನ್. ವಿಜಯಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಲೆಯಾಳಂ ಮಾಸಿಕ ಚಿಂಗಂ ಪೂಜೆಗಳಿಗಾಗಿ ಭಗವಾನ್ ಆಯ್ಯಪ್ಪ ದೇಗುಲ ದ್ವಾರವನ್ನು ಕಳೆದ ಸಂಜೆ ತೆರೆಯಲಾಗಿದೆ.

SCROLL FOR NEXT