ದೇಶ

ತ್ರಿವಳಿ ತಲಾಖ್ ಮುಂದುವರೆಯಲು ಕಾಂಗ್ರೆಸ್ ತುಷ್ಟೀಕರಣವೇ ಕಾರಣ: ಅಮಿತ್ ಶಾ

Srinivas Rao BV

ನವದೆಹಲಿ: ತ್ರಿವಳಿ ತಲಾಖ್ ಎಂಬ ಸಾಮಾಜಿಕ ಪಿಡುಗು ಈ ವರೆಗೂ ಮುಂದುವರೆಯುವುದಕ್ಕೆ ಕಾಂಗ್ರೆಸ್ ಮಾಡಿದ್ದ ತುಷ್ಟೀಕರಣವೇ ಕಾರಣ ಎಂದು ಗೃಹ ಸಚಿವ ಅಮಿತ್ ಶಾ ಹೇಳ್ದಿದಾರೆ. 

ಆ.18 ರಂದು ನವದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅಮಿತ್ ಶಾ, ಶೇ.92 ರಷ್ಟು ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಪರವಾಗಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್  ದುಃಸ್ವಪ್ನವಾಗಿತ್ತು. ತಲಾಖ್ ನ್ನು ಬಿಜೆಪಿ ಸರ್ಕಾರ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದೆ. ಇದರಿಂದ ಮುಸ್ಲಿಮ್ ಮಹಿಳೆಯರಿಗೆ ಉಪಯೋಗವಾಗುತ್ತದೆಯೇ ಹೊರತು ಬೇರೆ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಶಾ ಭಾನು ಪ್ರಕರಣವನ್ನು ಉಲ್ಲೇಖಿಸಿರುವ ಅಮಿತ್ ಶಾ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಬದಲಾವಣೆ ಮಾಡುವುದಕ್ಕೆ ಕಾಯ್ದೆಯನ್ನೇ ಜಾರಿಗೊಳಿಸಿದ್ದರು. ಕಾಂಗ್ರೆಸ್ ನ ತುಷ್ಟೀಕರಣದಿಂದಲೇ ತ್ರಿವಳಿ ತಲಾಖ್ ಈ ವರೆಗೂ ಮುಂದುವರೆದಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

SCROLL FOR NEXT