ದೇಶ

ಅಯೋಧ್ಯೆ ರಾಮಮಂದಿರಕ್ಕಾಗಿ ಚಿನ್ನದ ಇಟ್ಟಿಗೆ ದಾನ ನೀಡಲು ಮುಂದಾದ ಮೊಘಲ್ ವಂಶಸ್ಥ!

Raghavendra Adiga

ಹೈದರಾಬಾದ್: ಕಡೆಯ ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ವಂಶಸ್ಥರಾಗಿರುವ ರಾಜಕುಮಾರ ಹಬೀಬುದ್ದೀನ್ ಟ್ಯೂಸಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಾದರೆ ತಾವು ಚಿನ್ನದ  ಇಟ್ಟಿಗೆಯನ್ನು ದಾನ ಮಾಡಲು ಸಿದ್ದವಿರುವುದಾಗಿ ಹೇಳಿಕೊಂಡಿದ್ದಾರೆ.

ಹಬೀಬುದ್ದೀನ್ ಅವರು ಮೊಘಲ್ ದೊರೆಯ ಆರನೇ ತಲೆಮಾರಿನವರಾಗಿದ್ದು ಈಗ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ. 1529 ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ ಮೊದಲ ಮೊಘಲ್ ಚಕ್ರವರ್ತಿ ಬಾಬರ್ ಅವರ ವಂಶಸ್ಥನಾಗಿರುವ ನಾನು ಅಯೋಧ್ಯೆ ಬಾಬರಿ ಮಸೀದಿಯ ಜಾಗಕ್ಕೆ ನಿಜವಾದ ಹಕ್ಕುದಾರನಾಗಿದ್ದೇನೆ. ಹಾಗಾಗಿ ಭೂಮಿಯನ್ನು ನನಗೆ ಹಸ್ತಾಂತರಿಸಬೇಕೆಂದು ಇದೇ ವೇಳೆ ಅವರು ಬೇಡಿಕೆ ಇಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಜಾಗವನ್ನು ನನಗೆ ಹಸ್ತಾಂತರಿಸಿದರೆ ಬಾಬರಿ ಮಸೀದಿ ಇರುವ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನಾನು ಇಡೀ ಜಾಗವನ್ನೇ ದಾನ ನೀಡುತ್ತೇನೆ, ಜತೆಗೆ ದೇವಾಲಯ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆಗಳನ್ನು ಸಹ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಬಾಬರಿ ಮಸೀದಿಯನ್ನು ಡಿಸೆಂಬರ್ 6, 1992 ರಂದು ನೂರಾರು ಕರಸೇವಕರು ನೆಲಸಮ ಮಾಡಿದರು.ಮತ್ತು ಈ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇದೀಗ ನಿರಂತರ ವಿಚಾರಣೆಯಲ್ಲಿ ತೊಡಗಿದೆಇದರ ನಡುವೆ ಮೊಘಲ್ ವಂಶಸ್ಥ ಟ್ಯುಸಿ ಸಹ ಕೋರ್ಟ್ ಗೆ ಅರ್ಜಿ ಹಾಕಿದ್ದು ನ್ಯಾಯಾಲಯ ಅವರ ಅರ್ಜಿಯನ್ನಿನ್ನೂ ವಿಚಾರಣೆಗೆ ಪರಿಗಣಿಸಿಲ್ಲ.

ಈ ಪ್ರಕರಣದ ಸಂಬಂಧ ವಾದ ಹೂಡಿರುವ ಯಾವ ಪಕ್ಷಗಳೂ  ತಮ್ಮ ಹಕ್ಕನ್ನು ಸಾಬೀತುಪಡಿಸಲು ದಾಖಲೆಗಳನ್ನು ಹೊಂದಿಲ್ಲ ಎಂದು ಟ್ಯೂಸಿ ವಾದಿಸುತ್ತಾರೆ ಆದರೆ ಮೊಘಲರ ವಂಶಸ್ಥರಾಗಿರುವ ಅವರು ಭೂಮಿಯ ಅಹಕ್ಕು ಹೊಂದಿದ್ದಾರೆ.ಹಾಗಾಗಿ ನಾನು ದೇವಾಲಯ ನಿರ್ಮಾಣಕ್ಕಾಗಿ ಸಂಪೂರ್ಣ ಭೂಮಿ ಹಸ್ತಾಂತರಕ್ಕೆ ಇದಾಗಲೇ ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.ಅಯೋಧ್ಯೆಗೆ ಮೂರು ಬಾರಿ ಭೇಟಿ ನೀಡಿ ತಾತ್ಕಾಲಿಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಟ್ಯೂಸಿ, ಕಳೆದ ವರ್ಷ ತಮ್ಮ ಭೇಟಿಯ ವೇಳೆ ದೇವಾಲಯಕ್ಕಾಗಿ ಭೂಮಿ ನೀಡುವ ವಾಗ್ದಾನ ಮಾಡಿದ್ದರು.ಅಲ್ಲದೆ ರಾಮ್ ದೇವಾಲಯವನ್ನು ನಾಶಪಡಿಸಿದಕ್ಕಾಗಿ ಅವರು ಹಿಂದೂ ಸಮುದಾಯದ ಕ್ಷಮೆ ಯಾಚಿಸಿದ್ದರು.

SCROLL FOR NEXT