ದೇಶ

7 ದಿನಗಳಲ್ಲಿ ಬಂಗಲೆಗಳಿಂದ ಹೊರ ನಡೆಯಲು 200 ಮಾಜಿ ಸಂಸದರಿಗೆ ಆದೇಶ

Srinivas Rao BV

ನವದೆಹಲಿ: ಅಧಿಕಾರದಿಂದ ಇಳಿದರೂ ಸರ್ಕಾರಿ ಬಂಗಲೆಗಳಲ್ಲೇ ವಾಸಿಸುವ ಜನಪ್ರತಿನಿಧಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿದೆ. 

ಮಾಜಿ ಸಂಸದರು 7 ದಿನಗಳಲ್ಲಿ ಬಂಗಲೆಗಳನ್ನು ತೊರೆಯಬೇಕೆಂದು ಕೇಂದ್ರ ಸರ್ಕಾರ ಗಡುವು ವಿಧಿಸಿದ್ದು, ಲೋಕಸಭೆಯ ಸಮಿತಿ ಆದೇಶ ಹೊರಡಿಸಿದೆ. 

ಲೋಕಸಭೆಯ ಹೌಸಿಂಗ್ ಸಮಿತಿಯ ಅಧ್ಯಕ್ಷ ಸಿಆರ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಜಿ ಸಂಸದರು ವಾಸಿಸುತ್ತಿರುವ ಸರ್ಕಾರಿ ಬಂಗಲೆಗಳಲ್ಲಿ ಇನ್ನು 3 ದಿನಗಳಲ್ಲಿ ವಿದ್ಯುತ್, ನೀರಿನ ಸರಬರಾಜು, ಗ್ಯಾಸ್ ಸಂಪರ್ಕ ಎಲ್ಲವನ್ನೂ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಲೋಕಸಭೆ ವಿಸರ್ಜನೆಯಾಗಿ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದ ಒಂದು ತಿಂಗಳಲ್ಲಿ ಮಾಜಿ ಸಂಸದರು ಸರ್ಕಾರಿ ಬಂಗಲೆಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಮೇ.25 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ 16 ನೇ ಲೋಕಸಭೆಯನ್ನು ವಿಸರ್ಜಿಸಿದ್ದರು. 

SCROLL FOR NEXT