ದೇಶ

ಕಾಶ್ಮೀರ: ದಿಢೀರ್ ನೀರು ಬಿಡುಗಡೆ, ಸೇತುವೆ ಬಳಿ ಅಪಾಯಕ್ಕೆ ಸಿಲುಕಿದ್ದವರ ರಕ್ಷಣೆ ಮಾಡಿದ ಸೇನೆ, ಸಾಹಸದ ವಿಡಿಯೋ ವೈರಲ್

Srinivasamurthy VN

ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿದ ಭಾರತೀಯ ಸೇನೆ, ಕೂದಲೆಳೆ ಅಂತದರದಲ್ಲಿ ತಪ್ಪಿದ ಅನಾಹುತ

ಶ್ರೀನಗರ: ಜಮ್ಮುವಿನ ತಾವಿನದಿಗೆ ಏಕಾಏಕಿ ನೀರು ಹರಿಸಿದ ಪರಿಣಾಮ ಇಲ್ಲಿನ ಸೇತುವೆ ಬಳಿ ಕುಳಿತಿದ್ದ ಇಬ್ಬರು ಅಪಾಯಕ್ಕೆ ಸಿಲುಕಿದ್ದು, ಇದನ್ನು ಗಮನಿಸಿದ ಭಾರತೀಯ ಸೇನೆಯ ಯೋಧರು ಕೂಡಲೇ ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿದಿದ್ದು. ಪರಿಣಾಮ ಸೇತುವೆ ಬಳಿ ಕುಳಿತಿದ್ದ ಹಲವರು ಅಪಾಯಕ್ಕೆ ಸಿಲುಕಿದ್ದರು. ಈ ವೇಳೆ ಅಲ್ಲಿ ಕರ್ತವ್ಯನಿರತರಾಗಿದ್ದ ಭಾರತೀಯ ಸೇನೆಯ ಯೋಧರು ಕೂಡಲೇ ವಿಚಾರವನ್ನು ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ಸಹಿತ ರಕ್ಷಣಾ ಸಿಬ್ಬಂದಿಯನ್ನು ರವಾನೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ತಂಡ ಹೆಲಿಕಾಪ್ಟರ್ ನಲ್ಲಿದ್ದ ಹಗ್ಗದ ಮೂಲಕ ಸೈನಿಕನೋರ್ವನನ್ನು ಕೆಳಗೆ ಇಳಿಬಿಟ್ಟು ಕೆಳಗೆ ಅಪಾಯಕ್ಕೆ ಸಿಲುಕಿದ್ದವರನ್ನು ಮೇಲಕ್ಕೆ ಸೆಳೆದುಕೊಂಡಿದೆ.

ಆ ಮೂಲಕ ಸೇತುವೆ ಬಳಿ ಇದ್ದ ಎಲ್ಲರನ್ನೂ ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಿದೆ. ಸೈನಿಕರ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

SCROLL FOR NEXT