ದೇಶ

ಜೇಟ್ಲಿ ಆರೋಗ್ಯ ಮತ್ತಷ್ಟು ಕ್ಷೀಣ: ಯೋಗಿ ಆದಿತ್ಯನಾಥ್ ಸಂಪುಟ ಪುನಾರಚನೆ ಮುಂದೂಡಿಕೆ

Nagaraja AB

ಲಖನೌ: ಉತ್ತರ ಪ್ರದೇಶದ ಬಹುನಿರೀಕ್ಷಿತ ಯೋಗಿ ಆದಿತ್ಯನಾಥ್ ಸರ್ಕಾರದ ಸಂಪುಟ ಪುನಾರಚನೆ ಮುಂದೂಡಲ್ಪಟ್ಟಿದೆ.  ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿರುವುದರಿಂದ ಇಂದು ನಡೆಯಬೇಕಾಗಿದ್ದ ಸಂಪುಟ ಪುನಾರಚನೆಯನ್ನು ಮುಂದೂಡಲಾಗಿದೆ. 

ಆಹ್ವಾನ ಪತ್ರಿಕೆಗಳನ್ನು ನಿನ್ನೆಯಿಂದಲೇ ನಿಲ್ಲಿಸಲಾಗಿದ್ದು, ಸಂಪುಟ ಪುನಾರಚನೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 2017ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಯೋಗಿ ಸರ್ಕಾರದ ಸಂಪುಟ ಪುನಾರಚನೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿಗಳು   ಸೇರಿದಂತೆ ಯೋಗಿ ಸರ್ಕಾರದಲ್ಲಿ 43 ಸಚಿವರಿದ್ದಾರೆ. 

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 61 ಸಚಿವರನ್ನು ಹೊಂದಬಹುದಾಗಿದೆ. ಈ ಮಧ್ಯೆ ಎಲ್ಲವೂ ಅಂದುಕೊಂಡಂತೆ ನಡೆದರೆ  ಈ ವಾರದ ನಂತರ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT