ದೇಶ

ಉತ್ತರ ಪ್ರದೇಶ ಐಐಟಿ, ಐಐಎಂ ಗಳಲ್ಲಿ ಯೋಗ ಇನ್ನು ಮುಂದೆ ಪಠ್ಯ ಕ್ರಮದ ಭಾಗ!

Srinivas Rao BV

ಲಖನೌ: ಯೋಗ, ಭಗವದ್ಗೀತೆಗಳನ್ನು ಹಲವು ಆಧುನಿಕ, ಉನ್ನತ ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿದ್ದು, ಈಗ 
ಉತ್ತರ ಪ್ರದೇಶದ ಐಐಟಿ, ಐಐಎಂಗಳು ಯೋಗವನ್ನು ಪಠ್ಯಕ್ರಮದ ಭಾಗವನ್ನಾಗಿಸಲು ಮುಂದಾಗಿವೆ. 

ಐಐಟಿ ಖಾನ್ ಪುರದ ಪ್ರಾಧ್ಯಾಪಕರೊಬ್ಬರು ಬಗ್ಗೆ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಮಾಹಿತಿ ಹಂಚಿಕೊಂಡಿದ್ದು, ಪ್ರಾಧ್ಯಾಕರು ಹಾಗೂ ವಿದ್ಯಾರ್ಥಿಗಳಿಗೆ ಇನ್ನು ಮುಂದಿನ ದಿನಗಳಲ್ಲಿ ಯೋಗ ತರಗತಿಗಳು ಇರಲಿವೆ ಎಂದು ಹೇಳಿದ್ದಾರೆ. 

ಐಐಟಿ, ಐಐಎಂ ಗಳು ಇನ್ನು ಮುಂದಿನ ದಿನಗಳಲ್ಲಿ ಯೋಗ ಹಾಗೂ ಆಧ್ಯಾತ್ಮ ಹಾಗೂ ಮಾನವೀಯ ಮೌಲ್ಯಗಳನ್ನು ಪಠ್ಯ ಕ್ರಮಗಳಲ್ಲಿ ಅಳವಡಿಸಿಕೊಳ್ಳಲಿವೆ. ಇದರಿಂದಾಗಿ ಮುಂದಿನ ಕಾರ್ಯನಿರ್ವಾಹಕರುಗಳಿಗೆ ಒತ್ತಡ ನಿರ್ವಹಣೆ ಸುಲಭವಾಗಲಿದೆ ಎಂದು ಐಐಟಿ ಖಾನ್ ಪುರದ ಶಿಕ್ಷಕ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. 

ಈಗಾಗಲೇ ಹಲವು ಐಐಎಂಗಳು ಹಾಗೂ ಐಐಟಿಗಳು ಯೋಗವನ್ನು ಪಠ್ಯಕ್ರಮದ ಭಾಗವಾಗಿಸಿಕೊಂಡಿದ್ದು, ಶೀಘ್ರದಲ್ಲೇ ಇನ್ನೂ ಕೆಲವು ಇನ್ಸ್ಟಿಟ್ಯೂಟ್ ಗಳ ಪಠ್ಯದಲ್ಲೂ ಯೋಗ ಇರಲಿದೆ, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಒತ್ತಡ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗುವ ನಿದರ್ಶನಗಳು ಹಲವಾರಿವೆ. ಯೋಗದಿಂದ ಒತ್ತಡ ನಿರ್ವಹಣೆ ಹಾಗೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಸಾಧ್ಯವಾಗಲಿದೆ ಎಂದು ಹಿರಿಯ ಪ್ರಾಧ್ಯಾಪಕರು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಗುರು ಆಗಿರುವ ಡಾ.ಹೆಚ್ ಆರ್ ನಾಗೇಂದ್ರ ಅವರನ್ನು ಐಐಟಿ ಐಐಎಂ ಗಳಿಗೆ  ಯೋಗ ಪ್ಯಾಕೇಜ್ ನ್ನು ರಚಿಸುವಂತೆ ಆಹ್ವಾನ ನೀಡಲಾಗಿದೆ. ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ನಾಗೇಂದ್ರ ಯೋಗಿ, ಬರಹಗಾರರು, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಡೀಮ್ಡ್ ವಿವಿ)ಯ ಉಪಕುಲಪತಿಗಳೂ ಹೌದು. ಈಗಾಗಲೇ ಚೆನ್ನೈ ಹಾಗೂ ದೆಹಲಿಯ ಐಐಟಿಗಳು ಯೋಗವನ್ನು ಪಠ್ಯದಲ್ಲಿ ಅಳವಡಿಸಿಕೊಂಡಿವೆ. 

SCROLL FOR NEXT