ಸಂಗ್ರಹ ಚಿತ್ರ 
ದೇಶ

ಮುಂದಿನ ವರ್ಷದಿಂದ ಮೋದಿ ಕನಸಿನ ಬುಲೆಟ್ ರೈಲು ಕಾಮಗಾರಿ ಆರಂಭ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಯ ಭೂಸ್ವಾಧೀನಕ್ಕೆ ಇದ್ದ ಅಡ್ಡಿ ಆತಂಕಗಳು ಈಗ ನಿವಾರಣೆಯಾಗಿದ್ದು ಮುಂದಿನ ವರ್ಷದ ಮಾರ್ಚ್ – ಏಪ್ರಿಲ್ ನಿಂದ ಕಾಮಗಾರಿ ಪ್ರಾರಂಭವಾಗಿ,

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಯ ಭೂಸ್ವಾಧೀನಕ್ಕೆ ಇದ್ದ ಅಡ್ಡಿ ಆತಂಕಗಳು ಈಗ ನಿವಾರಣೆಯಾಗಿದ್ದು ಮುಂದಿನ ವರ್ಷದ ಮಾರ್ಚ್ – ಏಪ್ರಿಲ್ ನಿಂದ ಕಾಮಗಾರಿ ಪ್ರಾರಂಭವಾಗಿ,  2023 ಕ್ಕೆ ರೈಲು ಸೇವೆಗೆ ಚಾಲನೆ ದೊರಕಲಿದೆ.

ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ನ ಬುಲೆಟ್ ರೈಲು ಯೋಜನೆಗೆ ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ಬಹಳ ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಈಗ ಭೂಸ್ವಾಧೀನದ ಅಡ್ಡಿ ಆತಂಕಗಳು ಬಹುತೇಕ ನಿವಾರಣೆಯಾಗಿದೆ.

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿಲೋಮೀಟರ್ ಬುಲೆಟ್ ರೈಲು ಕಾಮಗಾರಿ ಮುಂದಿನ ವರ್ಷದ ಮಾರ್ಚ್ – ಏಪ್ರಿಲ್ ನಿಂದ ಆರಂಭವಾಗಿ 2023 ರ ವೇಳೆಗೆ ಕಾಮಗಾರಿ ಸಂಪೂರ್ಣ ಮುಗಿದು ರೈಲು ಸಂಚಾರವೂ ಆರಂಭವಾಗಲಿದೆ.

ಸರ್ಕಾರಿ ಭೂಮಿ 154 ಹೆಕ್ಟೇರ್ ಹಾಗೂ ರೈಲ್ವೆ ಇಲಾಖೆಯಲ್ಲಿನ 127 ಹೆಕ್ಟೇರ್ ಭೂಮಿ ಜೊತೆಗೆ 1ಸಾವಿರದ 379 ಹೆಕ್ಟೇರ್ ಖಾಸಗಿ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬುಲೆಟ್ ರೈಲು ಮಹಾರಾಷ್ಟ್ರದಲ್ಲಿ 155 ಕಿಲೋಮೀಟರ್ ಹಾಗೂ ಗುಜಾರಾತ್ ನಲ್ಲಿ 350 ಕಿಲೋಮೀಟರ್ ದೂರ ಹಾದು ಹೋಗಲಿದೆ.

ಮುಂಬೈ ಮತ್ತು ಅಹಮದಾಬಾದ್ ನಡುವೆ ಒಟ್ಟು 12 ರೈಲು ನಿಲ್ದಾಣಗಳು ಬರಲಿವೆ. ಈ ಮೊದಲು ನಿಗದಿಯಾಗಿದ್ದಂತೆ 2022 ರ ವೇಳೆಗೆ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳುವ ವೇಳೆಗೆ ದೇಶದ ಮೊದಲ ಬುಲೆಟ್ ರೈಲು ಮುಂಬೈ – ಅಹಮದಾಬಾದ್ ನಡುವೆ ಸಂಚಾರ ಮಾಡಬೇಕು ಎಂಬುದು ಮೋದಿ ಅವರ ಮಹಾನ್ ಕನಸಾಗಿತ್ತು. ಆದರೆ ಭೂಸ್ವಾಧೀನದ ಅಡ್ಡಿ ಆತಂಕಗಳಿಂದಾಗಿ ಈಗ ಯೋಜನೆ ಜಾರಿ ಒಂದು ವರ್ಷ ತಡವಾಗಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ವರ್ಷದಿಂದ ಕಾಮಗಾರಿ ಆರಂಭವಾಗಿ 2023 ರ ಕೊನೆಯ ವೇಳೆಗೆ ಮುಗಿಯಲಿದ್ದು ಅದೇ ವರ್ಷದ ಕೊನೆ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಒಂದು ಲಕ್ಷ ಕೋಟಿ ರೂ ಬಜೆಟ್ ನ ಬುಲೆಟ್ ರೈಲು ಸಂಚಾರ ಮಾಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT