ದೇಶ

ರೈಲು ಪ್ರಯಾಣಿಕರ ಗಮನಕ್ಕೆ: ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಗೆ ಬ್ರೇಕ್, ನೀರಿನ ಬಾಟಲ್ ನ್ನು ಇಲಾಖೆಗೇ ಹಿಂತಿರುಗಿಸಬೇಕು!

Srinivas Rao BV

ನವದೆಹಲಿ: ಪ್ಲ್ಯಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಗೆ ಬ್ರೇಕ್ ಹಾಕುವುದಕ್ಕೆ ಮುಂದಾಗಿದೆ. 

ಅ.2 ರಿಂದ 50 ಮೈಕ್ರೋನ್ ಗಿಂತ ಕಡಿಮೆ ದಪ್ಪ ಇರುವ ಪ್ಲ್ಯಾಸ್ಟಿಕ್ ವಸ್ತುಗಳ ಸಿಂಗಲ್ ಯೂಸ್ ಗೆ  ನಿಷೇಧ ವಿಧಿಸುವ ಬಗ್ಗೆ ಎಲ್ಲಾ ರೈಲ್ವೆ ಯುನಿಟ್ ಗಳಿಗೂ ನಿರ್ದೇಶನ ನೀಡಿದೆ. ಅ.2 ರಿಂದ ದೇಶಾದ್ಯಂತ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ನ್ನು ತ್ಯಜಿಸಲು ಪ್ರಧಾನಿ ನರೇಂದ್ರ ಮೋದಿ ಆ.15 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೇಶದ ಜನತೆಗೆ ಕರೆ ನೀಡಿದ್ದರು.  ಈ ಬೆನ್ನಲ್ಲೇ ರೈಲ್ವೆ ಸಚಿವಾಲಯ ಕ್ರಮ ಕೈಗೊಂಡಿದೆ. 

ರೈಲ್ವೆ ಸಚಿವಾಲಯ ನಿರ್ದೇಶನದ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ರೈಲ್ವೆ ವೆಂಡರ್ ಗಳು ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗ್ ಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಪ್ಲಾಸ್ಟಿಕ್ ಉತ್ಪನ್ನಗಳ ರೆಡ್ಯೂಸ್, ರೀಯೂಸ್, ರೆಫ್ಯೂಸ್ ಎಂಬ ಸೂತ್ರ ಅಳವಡಿಸಿಕೊಂಡು ಪ್ಲ್ಯಾಸ್ಟಿಕ್ ಮುಕ್ತ ಇಲಾಖೆಯನ್ನಾಗಿ ಮಾಡುವುದು ರೈಲ್ವೆಯ ಉದ್ದೇಶ. 

ಪ್ಲ್ಯಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದಕ್ಕೆ ಪೂರಕ ವಾತಾವರಣ ನಿರ್ಮಿಸಲು ಐಆರ್ ಸಿಟಿಸಿ ಹಲವು ಸೌಲಭ್ಯಗಳನ್ನೂ ನೀಡಲಿದ್ದು, ಗ್ರಾಹಕರು  ಕುಡಿಯುವ ನೀರಿಬ ಬಾಟಲ್ ಗಳು, ಪ್ಲ್ಯಾಸ್ಟಿಕ್ ವಸ್ತುಗಳನ್ನು ಹಿಂತಿರುಗಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿ, ಪ್ಲ್ಯಾಸ್ಟಿಕ್ ಬಾಟಲ್ ಕ್ರಶಿಂಗ್ ಯಂತ್ರವನ್ನು ನೀಡಲಿದೆ. 

SCROLL FOR NEXT