ದೇಶ

ಬಾಲಾಕೋಟ್ ದಾಳಿ ನಂತರ ಮೊದಲ ಬಾರಿಗೆ ಪಾಕಿಸ್ತಾನ ವಾಯುಮಾರ್ಗ ಬಳಸಿದ ಪ್ರಧಾನಿ ನರೇಂದ್ರ ಮೋದಿ 

Srinivas Rao BV

ನವದೆಹಲಿ: ಬಾಲಾಕೋಟ್ ದಾಳಿಯ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಾಯುಮಾರ್ಗ ಬಳಕೆ ಮಾಡಿದ್ದಾರೆ. ದ್ವಿಪಕ್ಷೀಯ ಮಾತುಕತೆಗಾಗಿ ಫ್ರಾನ್ಸ್ ಗೆ ತೆರಳಿರುವ ಪ್ರಧಾನಿ ಪಾಕಿಸ್ತಾನದ ವಾಯುಮಾರ್ಗದ ಮೂಲಕ ಹಾದು ಹೋಗಿದ್ದಾರೆ. 

ಬಾಲಾಕೋಟ್ ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ಮಾಡಿದ ನಂತರ ಫೆ.26 ರಂದು ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಮುಚ್ಚಿತ್ತು. ಈಗ 3 ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಗೆ ಮೊದಲು ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಕಿರ್ಗಿಸ್ತಾನದ ಬಿಶ್ಕೆಕ್ ನಲ್ಲಿ ಜೂನ್ 13 ಮತ್ತು 14ರಂದು ನಡೆದಿದ್ದ  ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯ ಪಾಕ್ ವಾಯುಮಾರ್ಗ ಬಳಸದೇ ಒಮನ್ ಮೂಲಕ ತೆರಳಲಿದ್ದರು. 
 

SCROLL FOR NEXT