ದೇಶ

ಪ.ಬ ಸಿಎಂ ಮಮತಾ ಬ್ಯಾನರ್ಜಿ ಕಾಲಿಗೆರಗಿದ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ: ವಿಡಿಯೋ ವೈರಲ್!

Srinivas Rao BV

ಐಪಿಎಸ್ ಅಧಿಕಾರಿಯೊಬ್ಬರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಾಲು ಮುಟ್ಟಿ ನಮಸ್ಕರಿಸಿರುವ ವಿಡಿಯೋ ವೈರಲ್ ಆಗತೊಡಗಿದೆ. 

ಪೊಲೀಸ್ ಇಲಾಖೆಯಲ್ಲಿ ಈ ಘಟನೆ ವಿವಾದ ಸೃಷ್ಟಿಸಿದೆ. ವೆಸ್ಟ್ರನ್ ರೇಂಜ್ ನ ಇನ್ಸ್ ಪೆಕ್ಟರ್ ಜನರಲ್ ಆಗಿರುವ ರಾಜೀವ್ ಮಿಶ್ರಾ ಇತರ ಅಧಿಕಾರಿಗಳೊಂದಿಗೆ ನಿಂತಿದ್ದರು. ಈ ವೇಳೆ ನಿರ್ದೇಶಕ ವಿನೀತ್ ಗೋಯಲ್ ಸಹ ಇದ್ದರು. ಗೋಯಲ್ ಅವರ ಜನ್ಮದಿನಾಚರಣೆ ಅಂಗವಾಗಿ ಮಮತಾ ಬ್ಯಾನರ್ಜಿ ಗೋಯಲ್ ಅವರಿಗೆ ಕೇಕ್ ನೀಡಿದರು. ಈ ಬಳಿಕ ತಮಗೆ ಕೇಕ್ ನೀಡಲು ಮುಂದಾದಾಗ ಮಮತಾ ಬ್ಯಾನರ್ಜಿ ಅವರ ಕಾಲಿಗೆರಗಿ ನಮಸ್ಕರಿಸಿದ್ದಾರೆ. 8 ಸೆಕೆಂಡ್ ಗಳ ಈ ವಿಡಿಯೋ ವೈರಲ್ ಆಗತೊಡಗಿದೆ. 

ಪಶ್ಚಿಮ ಬಂಗಾಳದ ಪೊಲೀಸರು ಮಮತಾ ಬ್ಯಾನರ್ಜಿ ಆಣತಿಯಂತೆ ವರ್ತಿಸುತ್ತಿರುವುದರ ಬಗ್ಗೆ ಬಿಜೆಪಿ ಹಲವು ಬಾರಿ ಆರೋಪ ಮಾಡಿದೆ. ಈ ವಿಡಿಯೋ ನಮ್ಮ ಆರೋಪವನ್ನು ಸಾಬೀತುಪಡಿಸಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. 

ನಿವೃತ್ತ ಐಪಿಎಸ್ ಅಧಿಕಾರಿ ಪಂಕಜ್ ದತ್ ಮಿಶ್ರಾ ಅವರ ನಡೆಯನ್ನು ಖಂಡಿಸಿದ್ದು, ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಐಪಿಸಿ ನಿಯಮಗಳನ್ನು ಪಾಲನೆ ಮಾಡಬೇಕು, ನಿಯಮಗಳ ಪ್ರಕಾರ ಮಿಶ್ರಾ ಸಿಎಂ ಗೆ ಸೆಲ್ಯೂಟ್ ಮಾಡಬಹುದು, ಆದರೆ ಸಮವಸ್ತ್ರ ಧರಿಸಿ ಕಾಲಿಗೆರಗುವುದು ನಿಮಯಗಳ ಉಲ್ಲಂಘನೆ ಹಾಗೂ ಶಿಕ್ಷಾರ್ಹ ತಪ್ಪು ಎಂದು ಹೇಳಿದ್ದಾರೆ. 

SCROLL FOR NEXT