ದೇಶ

ಕಾಶ್ಮೀರದ ಭಿನ್ನಾಭಿಪ್ರಾಯದ ಧ್ವನಿಗಳನ್ನು ಕೇಂದ್ರ ಸರ್ಕಾರ ಅಡಗಿಸುತ್ತಿದೆ: ಮಮತಾ ಬ್ಯಾನರ್ಜಿ 

Srinivas Rao BV

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಂಟುಮಾಡಿರುವ ವಿವಾದ ಚಾಲ್ತಿಯಲ್ಲಿರುವಾಗಲೇ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಕಾಶ್ಮೀರದಲ್ಲಿನ ಭಿನ್ನಾಭಿಪ್ರಾಯದ ಧ್ವನಿಗಳನ್ನು ಕೇಂದ್ರ ಸರ್ಕಾರ ಅಡಗಿಸುತ್ತಿದೆ. ಇದಕ್ಕಾಗಿ ತಮ್ಮ ಆಣತಿಯ ಪ್ರಕಾರ ನಡೆಯುವ ನಿವೃತ್ತ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡಲಾಗುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ದೀದಿ ಅಸಮಾಧಾನ ಹೊರಹಾಕಿದ್ದಾರೆ. 

ಒಂದು ಸರ್ಕಾರ, ಒಂದೇ ನಾಯಕ, ಒಂದು ಪಕ್ಷ ಸೂತ್ರವನ್ನು ಅನುಸರಿಸುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಬೆಲೆಯೇ ಇಲ್ಲದ ಅಧ್ಯಕ್ಷೀಯ ಮಾದರಿಯ ಸರ್ಕಾರದತ್ತ ದೇಶ ಸಾಗುತ್ತಿದೆ ಎಂದು ಮಮತಾ ಆತಂಕ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ತಮ್ಮ ಪಕ್ಷದ ಶಾಸಕರು, ಸಂಸದರನ್ನು ತನಿಖಾ ಸಂಸ್ಥೆಗಳ ಮೂಲಕ ಬೆದರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದೂ ಮಮತಾ ಆರೋಪಿಸಿದ್ದಾರೆ. 

SCROLL FOR NEXT