ದೇಶ

ಎಮ್ಮೆ ಕದ್ದರಾ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್, ದೂರು ದಾಖಲು!

Vishwanath S

ಲಖನೌ: ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರ ನಿರೀಕ್ಷಿತ ಜಾಮೀನು ಅರ್ಜಿ ರದ್ದುಗೊಳಿಸಿದ ನಂತರ ಅವರ ವಿರುದ‍್ದ ಎಮ್ಮೆ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ.

2016 ರ ಅಕ್ಟೋಬರ್ 15 ರಂದು ಸಂಸದರು ಇತರ ಐವರು ತಮ್ಮ ಮನೆಗೆ ಅಡ್ಡಗಾಲು ಹಾಕಿದ್ದಾರೆ. ನಿವಾಸ ಧ್ವಂಸಗೊಳಿಸಿ ಮನೆಯಲ್ಲಿದ್ದ ಎಮ್ಮೆ ಮತ್ತು 25 ಸಾವಿರ ರೂ. ನಗದು ದೋಚಿದ್ದಾರೆ ಎಂದು  ಆಸಿಫ್ ಮತ್ತು ಜಕೀರ್ ಅಲಿ ನೀಡಿದ ದೂರಿನ ಆಧಾರದ ಮೇಲೆ ಗುರುವಾರ ಖಾನ್ ವಿರುದ್ಧ ಎಮ್ಮೆ ಕಳುವು ಪ್ರಕರಣ ದಾಖಲಾಗಿದೆ.

ಘೋಸಿಯನ್ ಯತೀಮ್ಖಾನಾ ಬಳಿ ಇರುವ ತಮ್ಮ ಮನೆಯನ್ನು ಖಾಲಿ ಮಾಡಲು ಖಾನ್ ಅವರನ್ನು ಕೇಳಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಭೂ ಕಬಳಿಕೆ, ವಕ್ಫ್ ಆಸ್ತಿ ಅಕ್ರಮ ಸ್ವಾಧೀನ, ಪುಸ್ತಕ  ಕದಿಯುವುದು ಮತ್ತು ಚುನಾವಣಾ ಸಮಯದಲ್ಲಿ ದ್ವೇಷದ ಭಾಷಣ ಪ್ರಕರಣಗಳು ಸಹ ಸೇರಿದಂತೆ ಖಾನ್ ವಿರುದ್ಧ 50 ಪ್ರಕರಣ ದಾಖಲಾಗಿದೆ. 

ರಾಂಪುರದಲ್ಲಿ ತನ್ನ ವಿರುದ್ಧ ಭೂ ಕಬಳಿಕೆ ಪ್ರಕರಣಗಳಲ್ಲಿ ದಾಖಲಾಗಿರುವ 29 ಪ್ರಕರಣಗಳಲ್ಲಿ ಆತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ಎಮ್ಮೆ ಕಳುವು ಪ್ರಕರಣ ದಾಖಲಾಗಿದೆ.

SCROLL FOR NEXT