ದೇಶ

ಸೆ.2 ವರೆಗೂ ಸಿಬಿಐ ವಶದಲ್ಲೇ ಇರುತ್ತೇನೆ- ಸುಪ್ರೀಂ ಕೋರ್ಟ್ ಗೆ ಚಿದಂಬರಂ ಮನವಿ 

Srinivas Rao BV

ಐಎನ್ಎಕ್ಸ್ ಮೀಡಿಯಾ ಹಗರಣದ ಆರೋಪಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಸೆ.02 ರ ವರೆಗೆ ಸಿಬಿಐ ವಶದಲ್ಲೇ  ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ. 

ಆ.21 ರಂದು ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದ ಚಿದಂಬರಂ ಗೆ ಆ.30ರ ವರೆಗೆ ಸಿಬಿಐ ಕಸ್ಟಡಿ ವಿಧಿಸಲಾಗಿತ್ತು. ಈಗ ಅವಧಿ ಮುಕ್ತಾಯಗೊಂಡಿದ್ದು, ಮತ್ತೆ ಕೋರ್ಟ್ ಎದುರು ಹಾಜರುಪಡಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿರುವ ಚಿದಂಬರಂ ಪರ ವಕೀಲರು ಸೆ.2ರ ವರೆಗೆ ಸಿಬಿಐ ವಶದಲ್ಲೇ ಇರಲು ಚಿದಂಬರಂ ಗೆ ಅನುಮತಿ ನೀಡಬೇಕೆಂದು ಕೋರಿದ್ದಾರೆ. 

ಆರ್. ಭಾನುಮತಿ ಹಾಗೂ ಎಎಸ್ ಬೋಪಣ್ಣ ಅವರಿದ್ದ ವಿಭಾಗೀಯ ಪೀಠದೆದುರು ಚಿದಂಬರಂ ಈ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯ ತಮ್ಮನ್ನು ಸಿಬಿಐ ವಶಕ್ಕೆ ನೀಡಿರುವುದು ಹಾಗೂ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸೆ.2 ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಸೆ.02 ವರೆಗೆ ಸಿಬಿಐ ವಶದಲ್ಲೇ ಇರುತ್ತೇನೆ ಎಂಬ ಚಿದಂಬರಂ ಮನವಿ ಬಗ್ಗೆ ಕೋರ್ಟ್ ಯಾವುದೇ ಪ್ರಕ್ರಿಯೆ ನೀಡಿಲ್ಲ. 

SCROLL FOR NEXT