ದೇಶ

ಹಿಂದೂ ಸಿದ್ಧಾಂತದ ಪರವಾಗಿಯೇ ಇದ್ದೇನೆ, ಫಡ್ನವೀಸ್ ಸರ್ಕಾರಕ್ಕೆ ದ್ರೋಹ ಬಗೆದಿಲ್ಲ: ಸಿಎಂ ಠಾಕ್ರೆ

Manjula VN

ಮುಂಬೈ: ನಾನು ಅದೃಷ್ಟವಂತ ಮುಖ್ಯಮಂತ್ರಿ ಎಕೆಂದರೆ, ಅಂದು ನನ್ನನ್ನು ವಿರೋಧಿಸುತ್ತಿದ್ದ ನಾಯಕರೇ ಇಂದು ನನ್ನ ಜೊತೆಗಿದ್ದಾರೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಭಾನುವಾರ ಹೇಳಿದ್ದಾರೆ. 

ಮಹಾರಾಷ್ಟ್ರ ರಾಜ್ಯ ವಿಧಾನಮಂಡಲದಲ್ಲಿ ಮಾತನಾಡಿರುವ ಠಾಕ್ರೆಯವರು, ನಾನು ಅದೃಷ್ಟವಂತ ಮುಖ್ಯಮಂತ್ರಿ ಏಕೆಂದರೆ, ಅಂದು ನನ್ನನ್ನು ವಿರೋಧಿಸುತ್ತಿದ್ದ ನಾಯಕರೇ ಇಂದು ನನ್ನ ಜೊತೆಗಿದ್ದಾರೆ. ನನ್ನ ಜೊತೆಗಿದ್ದವರು ವಿರೋಧ ಪಕ್ಷದ ಬದಿಯಲ್ಲಿದ್ದಾರೆ. ಜನರ ಆಶೀರ್ವಾದ ಹಾಗೂ ನನ್ನ ಅದೃಷ್ಟದಿಂದ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಮುಖ್ಯಮಂತ್ರಿ ಸ್ಥಾನಕ್ಕೆ ಬರುತ್ತೇನೆಂದು ನಾನು ಎಂದಿಗೂ ಯಾರೊಂದಿಗೂ ಹೇಳಿರಲಿಲ್ಲ. ಆದರೆ, ಸಿಎಂ ಆಗಿದ್ದೇನೆಂದು ಹೇಳಿದ್ದಾರೆ. 

ದೇವೇಂದ್ರ ಫಡ್ನವೀಸ್ ಅವರಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ನಾನು ಎಂದಿಗೂ ಅವರೊಂದಿಗೆ ಸ್ನೇಹಿತನಂತೆಯೇ ಇರುತ್ತೇನೆ. ನಾನು ಇಂದಿಗೂ ಹಿಂದುತ್ವ ಸಿದ್ಧಾಂತದ ಪರವಾಗಿಯೇ ಇದ್ದೇನೆ. ಅದನ್ನು ಎಂದಿಗೂ ಬಿಡುವುದಿಲ್ಲ. ಕಳೆದ 5 ವರ್ಷಗಳಲ್ಲಿ ನಾನೆಂದಿಗ ಸರ್ಕಾರಕ್ಕೆ ದ್ರೋಹ ಬಗೆದಿಲ್ಲ. ಫಡ್ನವೀಸ್ ಅವರನ್ನು ನಾನು ವಿರೋಧ ಪಕ್ಷದ ನಾಯಕರೆಂದು ಎಂದಿಗೂ ಕರೆಯುವುದಿಲ್ಲ. ಆದರೆ, ಅವರನ್ನು ಜವಾಬ್ದಾರಿಯುತ ನಾಯಕರೆಂದು ಕರೆಯುತ್ತೇನೆ. ನೀವು ನಮ್ಮೊಂದಿಗೆ ಉತ್ತಮವಾಗಿ ನಡೆದಕೊಂಡಿದ್ದಿದ್ದರೆ, ಶಿವಸೇನೆ-ಬಿಜೆಪಿ ಇಬ್ಭಾಗವಾಗುವ ಪರಿಸ್ಥಿತಿ ಎಂದಿಗೂ ಎದುರಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT