ದೇಶ

ಮೈತ್ರಿ ಬಗ್ಗೆ ಈಗಲೇ ಭವಿಷ್ಯ ಹೇಳಲಾಗದು; ಡಿ‌.9ರ ನಂತರ ಸಿಹಿ ಸುದ್ದಿ: ಮಲ್ಲಿಕಾರ್ಜುನ ಖರ್ಗೆ

Srinivas Rao BV

ಬೆಂಗಳೂರು: ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್, ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ  ಖರ್ಗೆ, ಪ್ರಸಕ್ತ ಸಂದರ್ಭದಲ್ಲಿ ಹದಿನೈದು ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಫಲಿತಾಂಶದ ಬಳಿಕ ಮುಂದಿನ ಭವಿಷ್ಯದ ಬಗ್ಗೆ ತಾವು ಈಗಲೇ ಏನೂ ಹೇಳಲು ಆಗದು. ಆದರೂ ಡಿ 9 ರಂದು  ಸಿಹಿಸುದ್ದಿ ಕೊಡುತ್ತೇವೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನಾ ಎನ್ ಸಿಪಿ, ಕಾಂಗ್ರೆಸ್ ಸೇರಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ನಿಜವಾಗಲೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ  ಮಹಾರಾಷ್ಟ್ರದಲ್ಲಿ ಮೈತ್ರಿಗೆ ಮನಸಿರಲಿಲ್ಲ. ಆದರೆ ಬಿಜೆಪಿಯನ್ನು ದೂರಿವಿಡಲು, ಫ್ಯಾಸಿಸ್ಟ್ ಧೋರಣೆಯನ್ನು ಮಟ್ಟಹಾಕಲು, ಸಂವಿಧಾನ ಉಳಿವಿಗಾಗಿ ಶಾಸಕರ ಎಡಪಕ್ಷಗಳ ಒತ್ತಡದ ಮೇರೆಗೆ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯಕ್ಕಾಗಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಯಾರೇ  ಬಂದರೂ ಸ್ವಾಗತ. ಮುಂದಿನ ಭವಿಷ್ಯದ ಬಗ್ಗೆ ಈಗಲೇ ಏನು ಹೇಳಲಾಗದು ಎಂದು ನುಡಿದರು.

ಅಲ್ಲಿ ರಾತ್ರಿ 4.30ಕ್ಕೆ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳಿಸಿ 7.30 ಒಳಗೆ ತರಾತುರಿಯ ಸರ್ಕಾರ ರಚನೆ ಎಂದರೆ ಯಾವ ರೀತಿ ಇದು. ಈ ಎಲ್ಲಾ ಕೆಲಸಗಳು ನಡೆಯಲು ಕನಿಷ್ಠ 12 ತಾಸು ಬೇಕು. ಆದರೆ ಕೇವಲ 3 ತಾಸು ಒಳಗೆ ಅದು ರಾತ್ರೋರಾತ್ರಿ ಸರ್ಕಾರ ರಚನೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು. ಉಪಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಜನರಿಗೆ ಸ್ಪಂದಿಸದ ಭ್ರಷ್ಟ ಸರ್ಕಾರವನ್ನು ಉರುಳಿಸಬೇಕು. ಪ್ರಧಾನಿ  ನರೇಂದ್ರ ಮೋದಿಗೆ ಕರ್ನಾಟಕದ ಮೇಲೆ ಸಿಟ್ಟಿದ್ದು, ಯಡಿಯೂರಪ್ಪ ಅವರ ಮೇಲಿನ ಕೋಪವನ್ನು ನಮ್ಮ ರಾಜ್ಯದ ಮೇಲೆ ಏಕೆ ತೋರಿಸುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದರು.

SCROLL FOR NEXT